Breaking News

ಕಾಂಗ್ರೆಸ್ ನೆಲಕಚ್ಚಲಿದೆ ಎಂದು ರಾಜ್ಯ ಉಸ್ತುವಾರಿ ಅರುಣ ಸಿಂಗ್ ಭವಿಷ್ಯ ನುಡಿದರು.

Spread the love

ಬೆಳಗಾವಿ: ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳ ಮುಂದೆ ಗ್ಯಾರೆಂಟಿ ಕಾರ್ಡ ಹಂಚುತ್ತಿರುವ ಕಾಂಗ್ರೆಸ್ ನೆಲಕಚ್ಚಲಿದೆ ಎಂದು ರಾಜ್ಯ ಉಸ್ತುವಾರಿ ಅರುಣ ಸಿಂಗ್ ಭವಿಷ್ಯ ನುಡಿದರು.

  ಗುರುವಾರ ಬೆಳಗಾವಿ ವಿಭಾಗದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಹಾಗೂ ಜಿಲ್ಲೆಯಾದ್ಯಂತ ನಡೆದಿರುವ ರೈಲ್ವೆ ನಿಲ್ದಾಣದ ಆಧುನಿಕರಣ, ಹೆದ್ದಾರಿಗಳ ಕಾಮಗಾರಿ, ಹೆಲಿಕಾಪ್ಟರ್ ತಯಾರಿಕಾ ಘಟಕ, ಐಐಟಿ ಉದ್ಘಾಟನೆಯಾಗಿದ್ದು ರೈತ ವಿದ್ಯಾನಿಧಿ, ಕಿತ್ತೂರು ಕರ್ನಾಟಕ ನಿಗಮ, ಲಿಂಗಾಯತ ಮತ್ತು ಮರಾಠ ನಿಗಮಗಳ ಸ್ಥಾಪನೆ ಹಿಂದುಳಿದ ಅನೇಕ‌ ಸಮಾಜಗಳ ಅಭಿವೃದ್ಧಿ ನಿಗಮ ಸ್ಥಾಪನೆ, ಬಸವಣ್ಣನವರ ಅನುಭವ ಮಂಟಪದ ನಿರ್ಮಾಣ, ರಾಣಿ ಚನ್ನಮ್ಮಾಜಿಯ ಕೋಟೆ ನಿರ್ಮಾಣ ನಡೆದಿರುವದು ಹಾಗೂ ಎಸ್ಸಿ, ಎಸ್ಟಿ ಮಿಸಲಾತಿ ಹೆಚ್ಚಳ, ಲಿಂಗಾಯತ ಮತ್ತು ಒಕ್ಕಲಿಗ ಸಮಾಜಕ್ಕೆ 2ಡಿ, 2ಸಿ ನೀಡುವ ಮೂಲಕ ಸಾಮಾಜಿಕ ನ್ಯಾಯ ನೀಡಿದ ಬಿಜೆಪಿ ಸರ್ಕಾರದ ಸಾಧನೆಗಳನ್ನ ಮುಂದಿಟ್ಟುಕೊಂಡು ಜನತೆಯ ಮುಂದೆ ಮತಯಾಚನೆ ಮಾಡುತ್ತೇವೆ.

ಹತ್ತು ಜನ ಸ್ಟಾರ್ ಪ್ರಚಾರಕರು ಸಿಗದೆ ಕಾಂಗ್ರೆಸ್ ಪಕ್ಷ ದಿವಾಳಿಯಾಗಿದ್ದು ಸಮಾಜದಲ್ಲಿ ಗಲಬೆ ನಡಸಿ ಹತ್ತು ಹಲವಾರು ಪ್ರಕರಣದಲ್ಲಿ ಭಾಗಿಯಾದ ವ್ಯಕ್ತಿಗಳು ಚುನಾವಣೆಯ ಪ್ರಚಾರಕರಾಗಿರುವದು ಅದರ ಅಧಃ ಪತನದ ದಾರಿ ತೋರಿಸುತ್ತದೆ. ಇಂತಹ ಪಕ್ಷಕ್ಕೆ ಸೇರಿ ಬಿಜೆಪಿ ನಾಯಕರ ಬಗ್ಗೆ ಅಪವಾದ ಮಾಡುತ್ತಿರುವುದು ಮಹಾ ಪಾಪದ ಕೆಲಸ. ಕುಟುಂಬವನ್ನು ಬಿಟ್ಟು ದೇಶಕ್ಕಾಗಿ ಜೀವನವನ್ನೆ ದಾರಿ ಎರೆದು ಪಕ್ಷ ಕಟ್ಟುತ್ತಿರುವವವರ ಬಗ್ಗೆ ಟೀಕೆ ಮಾಡುವದು ಸರಿಯಾದ ಮಾರ್ಗವಲ್ಲ ಎಂದು ಶೆಟ್ಟರ್ ಹಾಗೂ ಸವದಿಯವರಿಗೆ ಟಾಂಗ್ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಹಾರಾಷ್ಟ್ರ ರಾಜ್ಯದ ಉನ್ನತ ಶಿಕ್ಷಣ ಹಾಗೂ ವೈಧ್ಯಕೀಯ ಸಚಿವ ಗಿರೀಷ ಮಹಾಜನ, ರಾಜ್ಯ ವಕ್ತಾರರಾದ ಎಮ್.ಬಿ.ಝೀರಲಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ,  ಮಹಾನಗರ ಅಧ್ಯಕ್ಷ ಅನೀಲ ಬೆನಕೆ, ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ, ಮಾಧ್ಯಮ ಸಂಚಾಲಕ ಎಪ್.ಎಸ್.ಸಿದ್ದನಗೌಡರ ಇದ್ದರು.


Spread the love

About Laxminews 24x7

Check Also

ಲಂಚ ಪ್ರಕರಣದಲ್ಲಿ ಬೆಂಗಳೂರಿನ ಸಿಪಿಆರ್‌ಐ ಜಂಟಿ ನಿರ್ದೇಶಕ ಸೇರಿ ಇಬ್ಬರನ್ನ ಬಂಧಿಸಿದ ಸಿಬಿಐ

Spread the loveಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಬೆಂಗಳೂರಿನ ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಪಿಆರ್​ಐ) ನ ಜಂಟಿ ನಿರ್ದೇಶಕ ರಾಜಾರಾಮ್ ಮೋಹನರಾವ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ