Breaking News

ಮನೆಯಿಂದಲೇ ಮತದಾನ: 8,730 ಮಂದಿಯಿಂದ ಆಯ್ಕೆ

Spread the love

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ 80 ವರ್ಷಕ್ಕೂ ಹೆಚ್ಚಿನ ವಯೋಮಾನದವರಲ್ಲಿ 8,730 ಮತದಾರರು ಮನೆಯಿಂದ ಮತದಾನ ಮಾಡುವುದನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಚುನಾವಣೆ ಆಯೋಗದ ಆದೇಶದಂತೆ ಪ್ರಥಮ ಬಾರಿಗೆ ಮನೆಯಿಂದ ಮತದಾನ ಆಯ್ಕೆಯನ್ನು ನೀಡಲಾಗುತ್ತಿದೆ.

ಈ ಆಯ್ಕೆ ಪಡೆದ ಮತದಾರರ ಮನೆಯಲ್ಲಿ ತಾತ್ಕಾಲಿಕ ಮತಗಟ್ಟೆಯನ್ನು ಬಿಬಿಎಂಪಿ ಪ್ರತಿನಿಧಿಗಳು ನಿರ್ಮಿಸಲಿದ್ದಾರೆ. ಮೇ 10ರ ಮತದಾನದ ದಿನದಿಂದ ನಾಲ್ಕೈದು ದಿನ ಮೊದಲೇ ಮತ ಚಲಾಯಿಸಬಹುದು.

ಮನೆಯಿಂದ ಮತದಾನ ಆಯ್ಕೆ ಪಡೆದುಕೊಂಡವರಲ್ಲಿ 8,611 ಮಂದಿ 80 ವರ್ಷಕ್ಕೂ ಮೇಲಿನವರಾಗಿದ್ದಾರೆ. 119 ಅಂಗವಿಕಲರಿದ್ದಾರೆ. ಈ ಆಯ್ಕೆ ಪಡೆಯಲು ಏ.17 ಕಡೆ ದಿನವಾಗಿತ್ತು. ಎಲ್ಲ ಚುನಾವಣಾಧಿಕಾರಿಗಳಿಂದ ಮಾಹಿತಿ ಪಡೆದ ಮೇಲೆ ಒಟ್ಟು ಮತದಾರರ ಸಂಖ್ಯೆಯಲ್ಲಿ ವ್ಯತ್ಯಾಸವಾಗಬಹುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ 2.36 ಲಕ್ಷ ಮಂದಿ 80 ವರ್ಷಕ್ಕೂ ಮೇಲ್ಟಟ್ಟವರಿದ್ದಾರೆ. ರಾಜ್ಯದಲ್ಲಿ ಈ ಸಂಖ್ಯೆ 12 ಲಕ್ಷವಾಗಿದೆ.

‘ಕಳೆದ ಬಾರಿ ಮತಗಟ್ಟೆಗೆ ಹೋಗಲು ಸಾಧ್ಯವಾಗದೆ ಮತ ಚಲಾಯಿಸಲಿಲ್ಲ. ಈ ಬಾರಿ ಮನೆಯಿಂದ ಮತದಾನ ಆಯ್ಕೆ ಮಾಡಿಕೊಂಡಿದ್ದೇನೆ. ನನ್ನ ಹಕ್ಕನ್ನು ಚಲಾಯಿಸಲು ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಅರಿಯಬೇಕು’ ಎಂದು ಬಸವನಗುಡಿ ನಿವಾಸಿ 93 ವರ್ಷದ ರಮಾದೇವಿ ಹೇಳಿದರು.


Spread the love

About Laxminews 24x7

Check Also

ಅಗಷ್ಟ 29 ಮತ್ತು 30 ರಂದು ಹುಕ್ಕೇರಿ ಅವುಜಿಕರ ಮಠದ ಜಾತ್ರಾಮಹೋತ್ಸವ ಜರಗುವದು – ಮಂಜುನಾಥ ಮಹಾರಾಜ.

Spread the loveಹುಕ್ಕೇರಿ : ಅಗಷ್ಟ 29 ಮತ್ತು 30 ರಂದು ಹುಕ್ಕೇರಿ ಅವುಜಿಕರ ಮಠದ ಜಾತ್ರಾಮಹೋತ್ಸವ ಜರಗುವದು – …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ