Breaking News

ಕಾಲ್ನಡಿಗೆಯಲ್ಲೇ ರಾಯಚೂರಿನಿಂದ ಮಧ್ಯ ಪ್ರದೇಶಕ್ಕೆ ಹೊರಟ ಕಾರ್ಮಿಕರು

Spread the love

ರಾಯಚೂರು: ನಗರದ ಹತ್ತಿ ಮಿಲ್‍ಗಳಲ್ಲಿ ಕೆಲಸ ಮಾಡುತ್ತಿದ್ದ ಮಧ್ಯ ಪ್ರದೇಶದ ಕಾರ್ಮಿಕರು ಲಾಕ್‍ಡೌನ್ ಹಿನ್ನೆಲೆ ನಡೆದುಕೊಂಡೇ ತಮ್ಮ ಊರುಗಳಿಗೆ ಹೊರಟಿದ್ದಾರೆ.

ಲಾಕ್‍ಡೌನ್ ನಿಂದ ಕಂಗಾಲಾದ ಸುಮಾರು 70 ಜನ ಕಾರ್ಮಿಕರು ಕೆಲಸವಿಲ್ಲದೆ ಸ್ವಗ್ರಾಮಕ್ಕೆ ವಾಪಸ್ಸಾಗುತ್ತಿದ್ದಾರೆ. ಕುಟುಂಬ ಸಮೇತ ಗಂಟುಮೂಟೆ ಕಟ್ಟಿಕೊಂಡು ರಾಯಚೂರಿನಿಂದ ಮಧ್ಯಪ್ರದೇಶಕ್ಕೆ ಕಾಲ್ನಡಿಗೆ ಮೂಲಕ ಹೊರಟಿದ್ದಾರೆ. ಮಕ್ಕಳು, ಮಹಿಳೆಯರು, ವಸ್ತುಗಳನ್ನು ಹೊತ್ತು ನಡೆದುಕೊಂಡೇ ಹೊರಟಿದ್ದಾರೆ.

ಸರ್ಕಾರ ಸೇವಾಸಿಂಧು ವೈಬ್‍ಸೈಟ್ ಆರಂಭಿಸಿದ್ದರೂ ಇವರಿಗೆ ಅನುಕೂಲವಾಗಿಲ್ಲ. ಸಮಪರ್ಕ ಮಾಹಿತಿ ಇಲ್ಲದೆ ಕಂಗಾಲಾಗಿ ನಡೆದುಕೊಂಡೇ ಸ್ವಗಾಮಕ್ಕೆ ಹೊರಟಿದ್ದಾರೆ. ಲಾಕ್‍ಡೌನ್ ಆದಾಗಿನಿಂದಲೂ ಕೆಲಸವಿಲ್ಲದ ಕಾರಣಕ್ಕೆ ಊಟಕ್ಕೂ ತೊಂದರೆಯಾಗಿದೆ. ಹೆಚ್ಚು ಸಂಖ್ಯೆಯಲ್ಲಿ ಕಾರ್ಮಿಕರು ನಡೆದುಕೊಂಡೇ ಹೊರಟಿರುವುದರಿಂದ ಸದ್ಯ ರಾಯಚೂರು ಜಿಲ್ಲಾಡಳಿತ ಕಾರ್ಮಿಕರನ್ನು ತಡೆದಿದೆ.

ಸದ್ಯ ಊಟದ ವ್ಯವಸ್ಥೆ ಮಾಡಿದ್ದು, ಊರಿಗೆ ತೆರಳಲು ಅನುಕೂಲ ಮಾಡುವುದಾಗಿ ಭರವಸೆ ಕೊಟ್ಟಿದೆ. ಹೀಗಾಗಿ ಕಾರ್ಮಿಕರು ರಾಯಚೂರಿನ ಚಿಕ್ಕಸುಗೂರು ಬಳಿ ಉಳಿದಿದ್ದಾರೆ. ಜಿಲ್ಲಾಡಳಿತ ಕೂಡಲೇ ವ್ಯವಸ್ಥೆ ಮಾಡದಿದ್ದರೆ ನಡೆದುಕೊಂಡೇ ಹೋಗಲು ಕಾರ್ಮಿಕರು ನಿರ್ಧರಿಸಿದ್ದಾರೆ.


Spread the love

About Laxminews 24x7

Check Also

ಮಾಜಿ ಸಚಿವನಿಗೆ ನವಿಲಿನ ಗರಿ ಹಾರ ಹಾಕಿದ ಅಭಿಮಾನಿಗಳು; ದೂರು ದಾಖಲಾಗ್ತಿದ್ದಂತೆ ಸ್ಪಷ್ಟನೆ ಕೊಟ್ಟ ಶಿವನಗೌಡ ನಾಯಕ್​​

Spread the love ರಾಯಚೂರು : ಮಾಜಿ ಸಚಿವ ಕೆ. ಶಿವನಗೌಡ ನಾಯಕ ಜನ್ಮದಿನದಂದು ಅಭಿಮಾನಿಗಳು ನವಿಲುಗರಿ ಹಾರ ಹಾಕಿರುವ ವಿಚಾರಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ