ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ವರುಣಾದಿಂದ ಸೋಲಿಸಿದರೆ 50 ಲಕ್ಷ ರೂಪಾಯಿ ಕೊಡುತ್ತೇನೆ ಎಂದು ರೈತರೊಬ್ಬರು ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ಮೈಸೂರಿನ ವರುಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೈತರೊಬ್ಬರು, ಸಿದ್ದರಾಮಯ್ಯ ವಿರುದ್ಧ ವಸತಿ ಸಚಿವ ವಿ.ಸೋಮಣ್ಣ ಸ್ಪರ್ಧಿಸುತ್ತಿದ್ದಾರೆ.
ಆದರೆ ಸಿದ್ದರಾಮಯ್ಯನವರನ್ನು ಸೋಲಿಸಲು ಸಾಧ್ಯವಿಲ್ಲ. 15 ವರ್ಷಗಳಿಂದ ಸಿದ್ದರಾಮಯ್ಯ ಈ ಊರಿನಲ್ಲಿ ಕೆಲಸ ಮಾಡಿದ್ದಾರೆ. ಈಗ ಯಾವನೋ ಬಂದು ನನಗೆ ವೋಟು ಕೊಡಿ ಗೆಲ್ಲಿಸಿ ಎಂದರೆ ಗೆಲ್ಲಿಸಲು ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ.
ದುಡ್ಡನ್ನು ಇಂದಲ್ಲ ನಾಳೆ ಸಂಪಾದಿಸಬಹುದು. ಆದರೆ ದುಡ್ಡು ಮುಖ್ಯವಲ್ಲ, ವ್ಯಕ್ತಿ ಮುಖ್ಯ. ಅವರು 7 ಸೇತುವೆಗಳನ್ನು ನಿರ್ಮಿಸಿದ್ದಾರೆ. ಕೆರೆಗಳನ್ನು ತುಂಬಿಸಿದ್ದಾರೆ. ಹತ್ತು ಕೆಜಿ ಉಚಿತ ಅಕ್ಕಿ ನೀಡಿದ್ದಾರೆ. ಇಂದು ಬಿಜೆಪಿಯವರು ಅದನ್ನು ಮತ್ತೆ 5 ಕೆಜಿಗೆ ಇಳಿಸಿದ್ದಾರೆ. ಸಿದ್ದರಾಮಯ್ಯನವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
Laxmi News 24×7