ಗೋಕಾಕ: ಗೋಕಾಕ ವಿಧಾನಸಭಾ ಕ್ಷೇತ್ರದಿಂದ ಶ್ರೀ ರಮೇಶ್ ಜಾರಕಿಹೊಳಿ ಅವರು ಇಂದು ಶುಭ ಮೂಹೂರ್ತ ದಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ವಿಧಾನ ಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ ಇಂದಿನಿಂದ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಶುರು ಆಗಿದೆ ಇಂದು ರಮೇಶ್ ಜಾರಕಿಹೊಳಿ ಅವರು ಗೋಕಾಕ ನಲ್ಲಿ ತಮ್ಮ ನಾಮ ಪತ್ರ ಸಲ್ಲಿಕೆಯನ್ನ ಅತ್ಯಂತ ಸರಳ ರೀತಿಯಲ್ಲಿ ಮಾಡಿದ್ದಾರೆ
ಗುರುವಾರ ಶುಭ ಮೂಹರ್ತದಲ್ಲಿ ತಮ್ಮ ಆಪ್ತರೊಂದಿಗೆ ನಗರದ ಮಿನಿ ವಿಧಾನಸೌದಕ್ಕೆ ಆಗಮಿಸಿದ ಬಿಜೆಪಿ ಅಧಿಕೃತ ಅಭ್ಯರ್ಥಿ ರಮೇಶ ಜಾರಕಿಹೊಳಿ ಅವರು ಚುನಾವಣಾಧಿಕಾರಿ ಗೀತಾ ಕೌಲಗಿ ಅವರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಟಿ.ಆರ್.ಕಾಗಲ್, ಚಿದಾನಂದ ದೇಮಶೆಟ್ಟಿ , ಲಕ್ಷ್ಮಿಕಾಂತ ಎತ್ತಿನಮನಿ ಉಪಸ್ಥಿತರಿದ್ದರು
ಅಪಾರ ಬೆಂಬಲಿಗರ ಮೆರವಣಿಗೆಯೊಂದಿಗೆ ಏಪ್ರಿಲ್ 17 ಅಥವಾ 18 ರಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಇಂದು ಶುಭ ಮೂಹರ್ತ ಇರುವುದರಿಂದ ಕೆವಲ ತಮ್ಮ ಆಪ್ತರೊಂದಿಗೆ ಬಂದು ರಮೇಶ ಜಾರಕಿಹೊಳಿ ಅವರು ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ.