Breaking News

ಲಿಂಗಾಯತ ಸಮಾಜದ ಭೂಮಿ ದುರ್ಬಳಕೆಯಾಗಿರುವ ಶಂಕೆ

Spread the love

ಬೆಳಗಾವಿ : ಲಿಂಗಾಯತ ಸಮಾಜದ ಭೂಮಿಯ ಅಭಿವೃದ್ಧಿ ಮಾಡುವ ಕುರಿತು ಅನುದಾನ ದುರ್ಬಳಕೆಯಾಗಿರುವ ಶಂಕೆ ವ್ಯಕ್ತವಾಗಿದ್ದು ವಿವಿಧ ಲಿಂಗಾಯತ ಸಮುದಾಯದ ಸಂಘಟನೆಗಳು ಸೋಮವಾರ ಬೆಳಗಾವಿ ಮಹಾಪಾಲಿಕೆಯ ಆಯುಕ್ತರ ಜೊತೆಗೆ ಚರ್ಚೆ ನಡೆಸಿದರು.

ಲಿಂಗಾಯತ ಸಮಾಜ ರುದ್ರಭೂಮಿ ಅನುಧಾನ ದುರ್ಬಳಕೆ ಆರೋಪ.

ಲಿಂಗಾಯತ ಮುಖಂಡ ರಾಜಕುಮಾರ ಟೋಪಣ್ಣವರ ಮಾತನಾಡಿ, ಲಿಂಗಾಯತ ರುದ್ರಭೂಮಿಗೆ ಬಿಡುಗಡೆಯಾದ ಅನುದಾನವನ್ನು ಲಿಂಗಾಯತ ಸಮಾಜದ ರುದ್ರಭೂಮಿಗೆ ಅಭಿವೃದ್ಧಿ ಪಡಿಸಿ ಬೇರೆ ಕಡೆ ಅನುದಾನವನ್ನು ಬಳಕೆ ಮಾಡಬೇಡಿ ಮಾಡಬೇಡಿ ಎಂದರು.
2022 ರಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಇಲ್ಲಿ ಯಾವುದೇ ಮೂಲಭೂತ ಸೌಲಭ್ಯ ಇಲ್ಲ. ನೀತಿ ಸಂಹಿತೆ ನೋಡಿ ಮೃತಪಡುವುದಿಲ್ಲ. ಮೂಲಭೂತ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.

 

ಬೆಳಗಾವಿ ಮಹಾಂತೇಶ ನಗರದಲ್ಲಿ ನಿರ್ಮಾಣ ಮಾಡುತ್ತಿರುವ ಅನುಭವ ಮಂಟಪದ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಬೇಕೆಂದು ಮನವಿ ಮಾಡಿಕೊಂಡರು.

 

ಪಾಲಿಕೆ ಆಯುಕ್ತ ರುದ್ರೇಶ ಘಾಳಿ ಮಾತನಾಡಿ, ಸದಾಶಿವ ನಗರದ ಸ್ಮಶಾನದ ಅಭಿವೃದ್ಧಿಗೆ ಮಾಡಿರುವ ವಿಚಾರಕ್ಕೆ ಒಂದು ರೂ. ಸಂಬಳ ವಾಗಿಲ್ಲ. ಆದರೆ ಅಧಿಕಾರಿಗಳು ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವ ಆರೋಪ ಮಾಡಿರುವುದು ಸರಿಯಲ್ಲ. ಇದರಲ್ಲಿ ಭ್ರಷ್ಟಾಚಾರ, ಹಣ ಗುಳಂ ಮಾಡಿದ್ದಾರೆ ಎನ್ನುವುದು ಸರಿಯಲ್ಲ ಎಂದು ವಿವಿಧ ಲಿಂಗಾಯತ ಮುಖಂಡರಿಗೆ ಮನವರಿಕೆ ಮಾಡಿಕೊಟ್ಟರು. ಜೊತೆಗೆ ಟೆಂಡರ್ ಗೆ ಸಂಬಂದಪಟ್ಟ ಎಲ್ಲ ರೀತಿಯ ಮಾಹಿತಿ ಪೈಲ್ ನ್ನು ನೀಡುವುದಾಗಿ ತಮ್ಮ ಸ್ಪಷ್ಟನೇ ನೀಡಿದರು.

ಸ್ಮಶಾನ ಅಭಿವೃದ್ಧಿ ಮಾಡುವುದು ಪ್ಯಾಕೇಜ್ ವರ್ಕ್ ಲಿಂಗಾಯತ ಸಮಾಜದ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣ ಬೇರೆ ಸಮುದಾಯಕ್ಕೆ ಬಳಕೆ ಮಾಡಬಾರದು ಎಂದು ಬೇಡಿಕೆ ಇದೆ.  ಅದನ್ನು ಸರಿ ಪಡಿಸಲಾಗುವುದು ಎಂದು ತಿಳಿಸಿದರು.

ಪಾಲಿಕೆ ಸದಸ್ಯ ಶಂಕರ ಪಾಟೀಲ, ಸಂಜಯ ಭಾವಿ, ರವೀಂದ್ರ  ಬೆಲ್ಲದ, ಬಸವರಾಜ ರೊಟ್ಟಿ, ಅಶೋಕ ಮಳಗಲಿ, ಸುನೀತಾ ದೇಸಾಯಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ