Breaking News

ಏಪ್ರಿಲ್ ನಿಂದ ಕೇಬಲ್ ದರ ಹೆಚ್ಚಳ

Spread the love

ಮೆಟ್ರೋ ಕಾಸ್ಟ್ ನೆಟ್ವರ್ಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಕೇಬಲ್ ದರ ಏಪ್ರಿಲ್ ನಿಂದ ಹೆಚ್ಚಳ ಮಾಡಲಾಗಿದೆ ಗ್ರಾಹಕರು ಸಹಕರಿಸಬೇಕು ಎಂದು ಮೆಟ್ರೋ ಕಾಸ್ಟ್ ನೆಟ್ವಕ್೯ ಇಂಡಿಯಾ ಪ್ರೈ.ಲಿನ ಎಂ.ಡಿ. ನಾಗೇಶ ಛಾಬ್ರಿಯಾ ಹೇಳಿದರು.

ಬುಧವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು  ಕಳೆದ 30 ವರ್ಷಗಳಿಂದ ಮೆಟ್ರೋ ಕಾಸ್ಟ್ ಇಂಡಿಯಾ ಕೇಬಲ್ ಸಂಸ್ಥೆ ಕೆಲಸ ಮಾಡುತ್ತಿದೆ. ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಮೊದಲು ರಿದ್ದಿ ಸಿದ್ಧಿ ಸಂಸ್ಥೆಯಿಂದ ಜನರಿಗೆ ಸೇವೆ ನೀಡಲಾಗುತ್ತಿತ್ತು. ಈಗ ಮೆಟ್ರೋ ಕಾಸ್ಟ್ ಇಂಡಿಯಾ ಮೂಲಕ ಸೇವೆ ನೀಡಲಾಗುತ್ತಿದೆ ಎಂದರು.

ಫೆ.18 ರಿಂದ ಕೇಬಲ್ ದರ ಹೆಚ್ಚಳ ಮಾಡಬೇಕೆಂದು ನಿರ್ಧಾರ ಮಾಡಲಾಯಿತು. ಅದರಂತೆ ಏ.1 ರಿಂದ ಹೊಸ ದರ ಚಾಲ್ತಿಯಲ್ಲಿದೆ. ಕನ್ನಡ ಹಾಗೂ ಕನ್ನಡದ ಮನರಂಜನೆಯ ಚಾನೆಲ್ ನೋಡಲು 10 ರೂ. ಗ್ರಾಹಕರು‌ ಹೆಚ್ಚಿಗೆ ಭರಿಸಬೇಕು. ಇದರಲ್ಲಿ ಜಿಎಸ್ ಟಿ ಒಳಗೊಂಡಿರುತ್ತದೆ. ಅದರಂತೆ ಹಿಂದಿ‌ ಮರಾಠಿ ಚಾನೇಲ್ ಗೂ ದರ ಹೆಚ್ಚಳ ಮಾಡಲಾಗಿದೆ ಎಂದರು.

ಸೋನಿ ಹ್ಯಾಪಿ ಇಂಡಿಯಾ, ಸನ್ ಉದಯ ಚಾನೆಲ್ ಎಲ್ಲ ಚಾನೆಲ್ ಕನ್ನಡ, ತಮಿಳು ಚಾನೆಲ್ ಫ್ಯಾಮಲಿ ಫ್ಯಾಕ್ 81% ಹೆಚ್ಚಳವಾಗಿದೆ. ಅದರಂತೆ ಪ್ರತಿ ಚಾನೆಲ್ ಮೇಲೆ ಪ್ಯಾಕೇಜ್ ಮೂಲಕ ದರ ಹೆಚ್ಚಳ ಮಾಡಲಾಗಿದೆ. ಜೀ ಟಾಕೀಸ್, ಸ್ಟಾರ್ ಸುವರ್ಣ, ಸೋನಿ ಮರಾಠಿ, ಸೋನಿ ಗೋಲ್ಡ್ ದರವು ಹೆಚ್ಚಳ ಮಾಡಲಾಗಿದೆ ಎಂದರು.

ಮೆಟ್ರೋ ಪ್ಯಾಕ್ ರಜೆ ಪ್ಲಾನ್ ಸಹ ಮಾಡಲಾಗಿದೆ. ಇದರಲ್ಲಿ ಕನ್ನಡ ಚಾನೆಲ್ ಗಳಿಗೆ ಮಾತ್ರ ದರ ನಿಗದಿ ಪಡಿಸಲಾಗಿದೆ. ಅಲ್ಲದೆ, ಸ್ಪೋರ್ಟ್ಸ್, ಹಿಂದಿ, ಮರಾಠಿ ಚಾಲೇನ್ ಮೇಲೂ ದರ ಹೆಚ್ಚಿಗೆ ಮಾಡಲಾಗಿದೆ. ಗ್ರಾಹಕರು ಸಹಕರಿಸಬೇಕು ಎಂದರು.

ಆಧುನಿಕ ದಿನ ಮಾನಗಳಲ್ಲಿ ಪ್ರಾದೇಶಿಕ ಕೇಬಲ್ ಗಳಿಗೆ ಹೆಚ್ಚಿಗೆ‌ ಬೇಡಿಕೆ ಇದೆ. ಕನ್ನಡ ಹಾಗೂ ಮರಾಠಿ‌ ಭಾಷೆಯ ಚಾನೆಲ್ ಗಳನ್ನು ಹೆಚ್ಚು ಜನರು ವೀಕ್ಷಣೆ ಮಾಡುತ್ತಿದ್ದಾರೆ. ಅಮೇಜಾನ್, ಪ್ರೈಮ್ ವಿಡಿಯೋ, ಓಟಿಟಿಯಲ್ಲಿಯೂ ಕನ್ನಡ ಹಾಗೂ ಮರಾಠಿ ಭಾಷೆಯನ್ನು ಎಷ್ಟು ಪ್ರಮಾಣದಲ್ಲಿ ತೋರಿಸುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದರು. ಸಂತೋಷ ಪರ್ವತರಾವ್, ರಾಜಶೇಖರ ಪಾಟೀಲ ಸೇರಿದಂತೆ ಇನ್ನಿತರರು ‌ಉಪಸ್ಥಿತರಿದ್ದರು.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ