Breaking News

ಸ್ವಾತಂತ್ರ್ಯ ಹೋರಾಟದಲ್ಲಿ ರಂಗಭೂಮಿ ಪಾತ್ರ ಮುಖ್ಯ; ಅಜಿತ ವಾರಕರಿ

Spread the love

ಬೆಳಗಾವಿ: ದೇಶಕ್ಕೆ ಸ್ವಾತಂತ್ರ್ಯ ಸಿಗುವಲ್ಲಿ ರಂಗಭೂಮಿಯ ಪಾತ್ರ ಬಹು ಮುಖ್ಯವಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಹೆಚ್ಚು ಜನ ಅನಕ್ಷರಸ್ಥರಿದ್ದರು. ಜನರಲ್ಲಿ ದೇಶಾಭಿಮಾನ ಮೂಡಿಸುವುದು, ದೇಶದ ಸ್ವಾತಂತ್ರ್ಯದ ಅವಶ್ಯಕತೆ ಕುರಿತು ತಿಳಿಸಿಕೊಡುವುದು ಅಷ್ಟೇ ಅಲ್ಲದೆ, ಎಲ್ಲರಲ್ಲಿ ಒಗ್ಗಟ್ಟನ್ನು ಮೂಡಿಸುವುದು ಕಷ್ಟದ ಕೆಲಸವಾಗಿತ್ತು.

ಈ ಎಲ್ಲ ಕೆಲಸವನ್ನು ಮಾಡುವಲ್ಲಿ ನಾಟಕ ಪ್ರಮುಖ ಪಾತ್ರ ವಹಿಸಿತು ಎಂದು ಬೆಳಗಾವಿಯ ಭಾರತೀಯ ಜೀವ ವಿಮಾ ನಿಗಮದ ಹಿರಿಯ ವಿಭಾಗಾಧಿಕಾರಿ ಅಜಿತ ವಾರಕರಿ ಹೇಳಿದರು.

ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ರಂಗಸಂಪದ ವತಿಯಿಂದ ಹಮ್ಮಿಕೊಂಡಿದ್ದ ದಿ. ಶಿವಕುಮಾರ ಸಂಬರಗಿಮಠ ನಾಟಕೋತ್ಸವ, ರಂಗಸಖ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಮೂರು ದಿನಗಳ ನಾಟಕೋತ್ಸವದ ಅಂತಿಮ ದಿನ ಬೆಂಗಳೂರಿನ ರಂಗಪಯಣದಿಂದ ಫೂಲನ್‌ದೇವಿ ಜೀವನ ಆಧಾರಿತ ನಾಟಕ ಪ್ರದರ್ಶನಗೊಂಡಿತು. ರಂಗರೂಪ, ವಿನ್ಯಾಸ, ನಿರ್ದೇಶನ ರಾಜಗುರು ಹೊಸಕೋಟೆ ಅವರದಾಗಿತ್ತು. ಕಲಾವಿದೆ ನೈನಾ ಅವರು ಫೂಲನ್‌ ದೇವಿ ಪಾತ್ರದಲ್ಲಿ ಕಾಣಿಸಿಕೊಂಡರು.

ಇದೇ ಸಂದರ್ಭದಲ್ಲಿ ಧಾರವಾಡದ ಅಭಿನಯ ಭಾರತಿ ಅಧ್ಯಕ್ಷರಾದ ಅರವಿಂದ ಕುಲಕರ್ಣಿ ಅವರಿಗೆ ರಂಗಸಖ-2023 ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಇದಲ್ಲದೆ ರಂಗಸಂಪದದ ಹಿರಿಯ ಕಲಾವಿದರಾದ ರಮೇಶ ಅನಿಗಳ ಹಾಗೂ ಗಂಗಾಧರ ಬೆನ್ನೂರ ಅವರನ್ನು ಸನ್ಮಾನಿಸಿ
ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗಂಗಾಧರ ಬೆನ್ನೂರ, ರಂಗಭೂಮಿಯವರದ್ದು ಮಾತು ಕಡಿಮೆ ಕೃತಿ ಹೆಚ್ಚು. ರಂಗಭೂಮಿಯಲ್ಲಿ ನನಗೊಂದು ರೂಪ ಕೊಟ್ಟವರು ರಂಗಸಂಪದ ತಂಡ. ಅದರಲ್ಲೂ ವಿಶೇಷವಾಗಿ ಶ್ರೀಪತಿ ಮಂಜನಬೆ„ಲು ಅವರ ಶ್ರಮ ಇದರಲ್ಲಿ ಬಹಳವಿದೆ ಎಂದರು. ಕಾರ್ಯಕ್ರಮದಲ್ಲಿ ರಂಗಸಂಪದದ ಶ್ರೀಪತಿ ಮಂಜನಬೈಲು, ವಿಜಯಲಕ್ಷ್ಮೀ ಸಂಬರಗಿಮಠ ಉಪಸ್ಥಿತರಿದ್ದರು. ಡಾ. ಎ.ಎಲ್‌. ಕುಲಕರ್ಣಿ ಅವರು ವಿಶ್ವ ರಂಗಭೂಮಿ ದಿನಾಚರಣೆ ಸಂದೇಶವನ್ನು ವಾಚಿಸಿದರು. ಪದ್ಮಾ ಕುಲಕರ್ಣಿ ಹಾಗೂ ಅಶೋಕ ಕುಲಕರ್ಣಿ ಪರಿಚಯಿಸಿದರು. ಪ್ರಸಾದ ಕಾರಜೋಳ ಸ್ವಾಗತಿಸಿದರು. ಗುರುನಾಥ ಕುಲಕರ್ಣಿ ವಂದಿಸಿದರು. ವೀಣಾ ಪಾಟೀಲ(ಹೆಗಡೆ) ನಿರೂಪಿಸಿದರು.


Spread the love

About Laxminews 24x7

Check Also

ಸುವರ್ಣಸೌಧದಲ್ಲಿ ಬಾಪೂಜಿ ಜೀವನ ಚರಿತ್ರೆಯ ಅಪರೂಪದ ಫೋಟೋಗಳ ಪ್ರದರ್ಶನ

Spread the loveಬೆಳಗಾವಿ: ಕುಂದಾನಗರಿ ಈಗ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಸಜ್ಜಾಗುತ್ತಿದೆ. ಇದರ ನಡುವೆ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸುವರ್ಣ ವಿಧಾನಸೌಧದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ