Breaking News

ಕರ್ನಾಟಕ ಚುನಾವಣೆ-2023: ಚುನಾವಣಾಪೂರ್ವ ಸಮೀಕ್ಷೆಗಳು ಪ್ರಕಟ; ಯಾರಿಗೆ ಎಷ್ಟು? ಇಲ್ಲಿದೆ ಪೂರ್ತಿ ವಿವರ..

Spread the love

ವದೆಹಲಿ: ಕರ್ನಾಟಕದ 2023ರ ವಿಧಾನಸಭಾ ಚುನಾವಣೆಗೆ ಇಂದು ದಿನಾಂಕ ಘೋಷಣೆಯಾಗುತ್ತಿದ್ದಂತೆ ಚುನಾವಣಾಪೂರ್ವ ಸಮೀಕ್ಷೆಗಳ ಫಲಿತಾಂಶ ಹೊರಬಿದ್ದಿದೆ. ಸದ್ಯಕ್ಕೆ ಐದು ಸಮೀಕ್ಷೆಗಳ ಫಲಿತಾಂಶ ಹೊರಬಿದ್ದಿದ್ದು, ಸರಾಸರಿಯಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿ ಕಂಡುಬಂದಿದೆ.

ಎಬಿಪಿ ಸಿವೋಟರ್, ಮ್ಯಾಟ್ರಿಸ್​, ಲೋಕ್​ಪಾಲ್, ಪಾಪ್ಯುಲರ್ ಪೋಲ್ಸ್​​ ಮತ್ತು ಝೀ ನ್ಯೂಸ್​ ತಮ್ಮ ಚುನಾವಣಾಪೂರ್ವ ಸಮೀಕ್ಷೆಯನ್ನು ಪ್ರಕಟ ಮಾಡಿವೆ.

ಎಬಿಪಿ ಸಿವೋಟರ್ ಚುನಾವಣಾಪೂರ್ವ ಸಮೀಕ್ಷೆ ಪ್ರಕಾರ ಕಾಂಗ್ರೆಸ್​ಗೆ 115ರಿಂದ 127 ಸ್ಥಾನ ಬರಲಿದ್ದು, ಬಿಜೆಪಿಗೆ 68-80 ಸ್ಥಾನ ಸಿಗಲಿದೆ. ಜೆಡಿಎಸ್​ಗೆ 23ರಿಂದ 35 ಸ್ಥಾನ ದಕ್ಕಲಿದೆ. ಇತರ ಪಕ್ಷಗಳು 0-2 ಸ್ಥಾನ ಗಳಿಸಲಿವೆ.

ಮ್ಯಾಟ್ರಿಜ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್​ಗೆ 88ರಿಂದ 98 ಸ್ಥಾನ ಬರಲಿದ್ದು, ಬಿಜೆಪಿಗೆ 96-106 ಸ್ಥಾನ ಸಿಗಲಿದೆ. ಜೆಡಿಎಸ್​ಗೆ 23ರಿಂದ 33 ಸ್ಥಾನ ಸಿಗಲಿದೆ. ಇಲ್ಲಿ 2ರಿಂದ 7 ಇತರರ ಪಾಲಾಗಲಿದೆ.

ಲೋಕ್​ಪೋಲ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್​ 116-123, ಬಿಜೆಪಿ 77-83, ಜೆಡಿಎಸ್​ 21-27 ಸ್ಥಾನ ಪಡೆಯಲಿದ್ದು, ಇತರ ಪಕ್ಷಗಳು 1-4 ಸ್ಥಾನ ಪಡೆಯಲಿವೆ.

ಪಾಪ್ಯುಲರ್ ಪೋಲ್ಸ್​ ಪ್ರಕಾರ ಕಾಂಗ್ರೆಸ್​-ಬಿಜೆಪಿ ಸಮಬಲವಾಗಿ ಇರಲಿವೆ. ಅಂದರೆ ಎರಡಕ್ಕೂ ತಲಾ 82ರಿಂದ 87 ಸ್ಥಾನಗಳು ಸಿಗಲಿವೆ. ಜೆಡಿಎಸ್​ 42-45 ಸ್ಥಾನಗಳಿದ್ದು, ಇತರ ಪಕ್ಷಗಳಿಗೆ ಯಾವುದೇ ಸ್ಥಾನ ಸಿಗುವುದಿಲ್ಲ.

ಝೀ ನ್ಯೂಸ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್​ 88-98, ಬಿಜೆಪಿ 96-106, ಜೆಡಿಎಸ್​ 23-33 ಸ್ಥಾನ ಗಳಿಸಲಿದ್ದು, 2ರಿಂದ 7 ಸ್ಥಾನಗಳು ಇತರ ಪಕ್ಷಗಳ ಪಾಲಾಗಲಿವೆ.

ಎಬಿಪಿ ಸಿವೋಟರ್ ಸಮೀಕ್ಷೆ ಪ್ರಕಾರ ಮುಂಬೈ-ಕರ್ನಾಟಕ ಪ್ರದೇಶದಲ್ಲಿ ಕಾಂಗ್ರೆಸ್​-ಬಿಜೆಪಿಗೆ ತಲಾ ಶೇ. 43 ವೋಟ್ ಹಂಚಿಕೆಯಾಗಲಿದೆ. ಅದಾಗ್ಯೂ ಕಾಂಗ್ರೆಸ್​ ಈ ಭಾಗದಲ್ಲಿ 25ರಿಂದ 29 ಮತ್ತು ಬಿಜೆಪಿ 21ರಿಂದ 25 ಸೀಟು ಗೆಲ್ಲಲಿದೆ.

ಕರಾವಳಿಯಲ್ಲಿ ಬಿಜೆಪಿ ಗರಿಷ್ಠ ಸ್ಥಾನ ಗೆಲ್ಲಲಿದೆ ಎಂದಾದರೂ ಕಾಂಗ್ರೆಸ್​ ಬಿಗಿ ಪೈಪೋಟಿ ನೀಡಲಿದೆ ಎಂಬುದೂ ಕಂಡುಬಂದಿದೆ. ಅಂದರೆ ಕರಾವಳಿಯಲ್ಲಿ ಬಿಜೆಪಿಗೆ ಶೇ. 46 ಮತ ಸಿಕ್ಕರೆ, ಕಾಂಗ್ರೆಸ್​ಗೆ ಶೇ. 41 ಮತ ಸಿಗಲಿದೆ. ಜೆಡಿಎಸ್​ ಶೇ. 6 ಮತ ಪಡೆಯಲಿದೆ ಎನ್ನಲಾಗಿದೆ.

 

ಮಧ್ಯ ಕರ್ನಾಟಕದಲ್ಲಿ ಬಿಜೆಪಿ ಶೇ. 38 ಮತ ಗಳಿಸಿದರೆ, ಕಾಂಗ್ರೆಸ್ ಶೇ. 41 ಮತ ಗಳಿಸಲಿದೆ ಎನ್ನಲಾಗಿದೆ. ಅಂದರೆ ಬಿಜೆಪಿ 12ರಿಂದ 16 ಮತ್ತು ಕಾಂಗ್ರೆಸ್​ 18ರಿಂದ 22 ಸ್ಥಾನ ಗೆಲ್ಲಲಿದೆ.

ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಶೇ. 20 ಮತ್ತು ಕಾಂಗ್ರೆಸ್​ಗೆ ಶೇ. 36 ಮತ ಚಲಾವಣೆ ಆಗಲಿದೆ. ಆದರೆ ಜೆಡಿಎಸ್​ಗೆ 26ರಿಂದ 27 ಮತ್ತು ಕಾಂಗ್ರೆಸ್​ಗೆ 24ರಿಂದ 28 ಸೀಟು ಸಿಗಲಿದ್ದು, ಬಿಜೆಪಿ 1 ಅಥವಾ ಗರಿಷ್ಠ 5 ಸ್ಥಾನಕ್ಕೆ ಸೀಮಿತವಾಗಲಿದೆ ಎಂದು ಸಮೀಕ್ಷೆ ಹೇಳಿದೆ.

ಮುಂದಿನ ಮುಖ್ಯಮಂತ್ರಿಯ ವೋಟಿಂಗ್​ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗರಿಷ್ಠ ಮತದಾನ ಆಗಿದ್ದು, ಅವರೇ ಮುಂದಿನ ಸಿಎಂ ಎಂದು ಸಮೀಕ್ಷೆ ಹೇಳಿದೆ. ಬಹುತೇಕ ಮತದಾರರು ಕಾಂಗ್ರೆಸ್​ ಬಹುಮತ ಗಳಿಸಲಿದೆ ಎಂದಿದ್ದು, ಸಿಎಂ ವೋಟಿಂಗ್​ನಲ್ಲಿ ಸಿದ್ದರಾಮಯ್ಯಗೆ ಶೇ. 39.1 ಮತದಾನ ಆಗುವ ಮೂಲಕ ಆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.


Spread the love

About Laxminews 24x7

Check Also

ಕಾಗವಾಡ ತಾ.ಶೇಡಬಾಳದ ಬಿಎಸ್ಎಫ್ ಯೋಧ ಅನಾರೋಗ್ಯದಿಂದ ನಿಧನ

Spread the love ಕಾಗವಾಡ ತಾ.ಶೇಡಬಾಳದ ಬಿಎಸ್ಎಫ್ ಯೋಧ ಅನಾರೋಗ್ಯದಿಂದ ನಿಧನ ಬಿಎಸ್ಎಫ್ ಯೋಧ ದಗಡು ಪೂಜಾರಿ ರಜೆಯ ಮೇಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ