Breaking News

ಪ್ರಸ್ತುತ ಮಾರುಕಟ್ಟೆ ಅಪೇಕ್ಷಿಸುವ ವೃತ್ತಿ ಕೌಶಲಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು’: RCU ಕುಲಸಚಿವ ಪ್ರೊ.ಶಿವಾನಂದ ಗೊರನಾಳೆ

Spread the love

ಬೆಳಗಾವಿ: ‘ಪ್ರಸ್ತುತ ಮಾರುಕಟ್ಟೆ ಅಪೇಕ್ಷಿಸುವ ವೃತ್ತಿ ಕೌಶಲಗಳನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಶಿವಾನಂದ ಗೊರನಾಳೆ ಹೇಳಿದರು.

ಇಲ್ಲಿನ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವೃತ್ತಿ ಮಾರ್ಗದರ್ಶನ, ತರಬೇತಿ ಮತ್ತು ವಿದ್ಯಾರ್ಥಿ ಉದ್ಯೋಗ ಕೋಶ ಹಾಗೂ ಟಿಸಿಎಸ್ ಸಾಫ್ಟವೇರ್ ಸಂಸ್ಥೆ ಹಮ್ಮಿಕೊಂಡಿದ್ದ ನೇಮಕಾತಿ ಸಂದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

 

‘ನಮ್ಮ ಜ್ಞಾನ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ವೃತ್ತಿ ಆಯ್ಕೆ ಮಾಡಿಕೊಳ್ಳಬೇಕು. ಶ್ರಮವಹಿಸಿ ದುಡಿದು ಯಶಸ್ಸಿನ ಪಥವೇರಬೇಕು’ ಎಂದರು.

ವಿಶ್ವವಿದ್ಯಾಲಯದ ವಿದ್ಯಾರ್ಥಿ ಉದ್ಯೋಗ ಕೋಶದ ಅಧಿಕಾರಿ ಡಾ.ಆರ್.ಎನ್.ಮನಗೂಳಿ ಮಾತನಾಡಿದರು. ಪ್ರಾಚಾರ್ಯ ಡಾ.ಎಸ್.ಎಸ್.ತೇರದಾಳ ಅಧ್ಯಕ್ಷತೆ ವಹಿಸಿದ್ದರು.

ಎಂ.ಕಿರಣ, ಗಿರೀಶ ಪ್ರಕಾಶ, ಡಾ.ಮುಕುಂದ ಮುಂಡರಗಿ ಇತರರಿದ್ದರು. ವಿನೂತ ವಡಗಾವಿ ವಂದಿಸಿದರು. ಡಾ.ಜ್ಯೋತಿ ಪಾಟೀಲ ನಿರೂಪಿಸಿದರು. ಜಿಲ್ಲೆಯ 530 ವಿದ್ಯಾರ್ಥಿಗಳು ಭಾಗವಹಿಸಿದ್ದರು.


Spread the love

About Laxminews 24x7

Check Also

ಹೆಗಲ ಮೇಲೆ ತಾಯಿ ಹೊತ್ತುಕೊಂಡು 220 ಕಿಮೀ ಪಾದಯಾತ್ರೆ ಮೂಲಕ ವಿಠ್ಠಲನ ದರ್ಶನ ಮಾಡಿಸಿದ ಮಗ

Spread the love ಹೆಗಲ ಮೇಲೆ ತಾಯಿ ಹೊತ್ತುಕೊಂಡು 220 ಕಿಮೀ ಪಾದಯಾತ್ರೆ ಮೂಲಕ ವಿಠ್ಠಲನ ದರ್ಶನ ಮಾಡಿಸಿದ ಮಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ