Breaking News

ಲಿಂಗಾಯತ ಮತ ಬೇಕಿಲ್ಲ; ಸುಳ್ಳಿನ ಫ್ಯಾಕ್ಟರಿಯಿಂದ ಸುಳ್ಳಿನ ಸುದ್ದಿ:ಸಿ.ಟಿ.ರವಿ

Spread the love

ಚಿಕ್ಕಮಗಳೂರು : ಲಿಂಗಾಯತ ಸಮುದಾಯಕ್ಕೆ ಪ್ರಾಮುಖ್ಯತೆ ಕೊಡಬೇಕಿಲ್ಲ ಎಂಬ ಹೇಳಿಕೆ ಕುರಿತು ವ್ಯಾಪಕ ಚರ್ಚೆಯಾಗುತ್ತಿರುವ ವೇಳೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಸ್ಪಷ್ಟನೆ ನೀಡಿದ್ದು, ”ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿಯಿಂದ ಸುಳ್ಳಿನ ಸುದ್ದಿ ಹಬ್ಬಿಸಿದ್ದಾರೆ” ಎಂದಿದ್ದಾರೆ.

 

”ಕನಸಿನಲ್ಲೂ ಕೂಡ ಜಾತಿ ರಾಜಕಾರಣ ಮಾಡಿದವನಲ್ಲ ಜಾತಿಯ ಬಗ್ಗೆ ಯೋಚನೆಯನ್ನು ಮಾಡಲ್ಲ,ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಲಿಂಗಾಯತ ವಿರೋಧಿ ಭಾವನೆ ಹುಟ್ಟು ಹಾಕುವ ಕೆಲಸವನ್ನ ಮಾಡುತ್ತಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ಇದೆ, ನಾನು ಏನು ಅನ್ನುವುದು ಜನರಿಗೆ ಗೊತ್ತಿದೆ. ಇಂತಹ ಸುಳ್ಳು ಸುದ್ದಿಯಿಂದ ಹೊರಗಿನವರಿಗೆ ಗೊಂದಲ ಸೃಷ್ಟಿ ಮಾಡಬಹುದು. ಆದರೆ ಒಳಗಿನವರಿಗೆ ಎಲ್ಲವೂ ಸ್ಪಷ್ಟವಾಗಿದೆ. ಇಂತಹ ಪ್ರಯತ್ನವನ್ನ ಹಿಂದಿಯೂ ಮಾಡಿ ವಿಫಲವಾಗಿದ್ದರು” ಎಂದರು.

”ಸುಳ್ಳು ಸುದ್ದಿಯನ್ನು ಗೊಂದ ಸೃಷ್ಟಿ ಮಾಡಿ ಹಬ್ಬಿಸಿದ್ದಾರೆ. ನಾನು ಮಾತನಾಡಿದ್ದರೆ ಕ್ಷಮೆಯಾಚನೆ ಮಾಡುತ್ತಿದ್ದೆ, ಜನರು ಜಾತಿ ಮೀರಿ ವೋಟ್ ಹಾಕಿ ನನ್ನ ಗೆಲ್ಲಿಸಿದ್ದಾರೆ. ವಿರೋಧಿಗಳಿಗೆ ಅಭಿವೃದ್ಧಿ ಕೆಲಸದಲ್ಲಿ ಚರ್ಚೆ ಮಾಡಲಾಗುವುದಿಲ್ಲ. ಜಾತಿ ಹೆಸರಿನಲ್ಲಿ ಒಡೆಯಬಹುದು ಎಂದು ಸುಳ್ಳಿನ ಫ್ಯಾಕ್ಟರಿ ಮೂಲಕ ದಾಳ ಉರುಳಿಸಿದ್ದಾರೆ. ಸುಳ್ಳು ಸುದ್ದಿಯನ್ನ ಯಾರು ಹಬ್ಬಿಸಿದ್ದಾರೆ ಅವರ ವಿರುದ್ಧ ದೂರನ್ನು ನೀಡಲಾಗಿದೆ.
ಇದನ್ನ ಷಡ್ಯಂತ್ರ ಭಾಗವಾಗಿ ಮಾಡಿದ್ದಾರೆ” ಎಂದರು.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ