Breaking News

ಕುಷ್ಟಗಿಯಲ್ಲಿ ಪ್ರತ್ಯೇಕ ಅಪಘಾತ: ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ವ್ಯಕ್ತಿ ಮೃತ್ಯು

Spread the love

ಕುಷ್ಟಗಿ: ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರತ್ಯೇಕ ಬೈಕ್ ಅಪಘಾತದಲ್ಲಿ ಓರ್ವ ಯುವಕ ದುರ್ಮರಣಕ್ಕೀಡಾಗಿದ್ದು ಇಬ್ಬರು ಬೈಕ್ ಸವಾರರು ಗಾಯಗೊಂಡಿರುವ ಘಟನೆ ನಡೆದಿದೆ.

 

ಕುಷ್ಟಗಿ – ಗಜೇಂದ್ರಗಡ ರಾಜ್ಯ ಹೆದ್ದಾರಿಯಲ್ಲಿ ಹಿರೇಬನ್ನಿಗೋಳ ಸಮೀಪ ಎತ್ತಿನ ಬಂಡಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಮೃತನಾಗಿದ್ದಾನೆ. ಕುಷ್ಟಗಿಯ ವಿಜಯಕುಮಾರ ಮನ್ನೇರಾಳ (22) ಮೃತ ದುರ್ದೈವಿ. ಮೃತ ಯುವಕ ವಿಜಯಕುಮಾರ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಶವಗಾರದಲ್ಲಿರಿಸಲಾಗಿದೆ.

ಕಳೆದ ಫೆ.18 ರಂದು ಶಿವರಾತ್ರಿಯಂದು ಇಟಗಿ ಭೀಮಾಂಬಿಕೆ ದೇವಸ್ಥಾನದಲ್ಲಿ ಸಾಮೂಹಿಕ ಮದುವೆಯಲ್ಲಿ ಮದುವೆಯಾಗಿತ್ತು. ಮದುವೆಯಾಗಿ ತಿಂಗಳಾಂತ್ಯದಲ್ಲಿ ಯುವಕ ವಿಜಯಕುಮಾರ ಸಾವಿನ ಸುದಿ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ.

ರಾಷ್ಟ್ರೀಯ ಚತುಷ್ಪಥ ಹೆದ್ದಾರಿಯಲ್ಲಿ ಯು ಟರ್ನ್ ಮಾಡುವ ವೇಳೆ ವಣಗೇರಾ ಯುವಕರಾದ ಮಂಜುನಾಥ ಪೂಜಾರಿ, ಮೌನೇಶ ಬೈಕ್ ನಿಂದ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.


Spread the love

About Laxminews 24x7

Check Also

ಗ್ರಾಮ ಪಂಚಾಯಿತಿಗಳು ಸಬಲೀಕರಣಗೊಂಡರೆ ನಿಜವಾದ ಗ್ರಾಮ ಸ್ವರಾಜ್ : ಚನ್ನರಾಜ ಹಟ್ಟಿಹೊಳಿ

Spread the love ಗ್ರಾಮ ಪಂಚಾಯಿತಿಗಳು ಸಬಲೀಕರಣಗೊಂಡರೆ ನಿಜವಾದ ಗ್ರಾಮ ಸ್ವರಾಜ್ : ಚನ್ನರಾಜ ಹಟ್ಟಿಹೊಳಿ ಖಾನಾಪುರ: ಗ್ರಾಮ ಪಂಚಾಯಿತಿಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ