Breaking News

ಗಡಿ ಭಾಗದವರಿಗೆ ಮಹಾರಾಷ್ಟ್ರ ಸರ್ಕಾರದ ವಿಮೆ; ಹೇಗೆ ತಡೆಯಬೇಕು ಯೋಚಿಸುತ್ತೇನೆ:ಸಿಎಂ

Spread the love

ಬೆಳಗಾವಿ: ‘ಕರ್ನಾಟಕ ಗಡಿ ಭಾಗದ 865 ಹಳ್ಳಿಗಳಿಗೂ ಅನ್ವಯ ಆಗುವಂತೆ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ನೀಡಿದ್ದರೆ, ಅದನ್ನು ಪರಿಶೀಲಿಸಿ ಹೇಗೆ ತಡೆಯಬೇಕು ಯೋಚಿಸುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

 

ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ನೀಡಿದ್ದಕ್ಕೆ ನಾನೇಕೆ ರಾಜೀನಾಮೆ ಕೊಡಬೇಕು. ನಾಡು, ನುಡಿ, ಗಡಿ ಜನರ ರಕ್ಷಣೆ ವಿಚಾರದಲ್ಲಿ ನಾನು ಡಿ.ಕೆ.ಶಿವಕುಮಾರ ಅವರಿಂದ ಪಾಠ ಕಲಿಯಬೇಕಾಗಿಲ್ಲ’ ಎಂದರು.

‘ನಾವು ಕೂಡ ಪಂಡರಪುರ, ತುಳಜಾಪುರಕ್ಕೆ ಹೋಗುವ ಕರ್ನಾಟಕದವರಿಗೆ ನೆರವು ನೀಡುತ್ತಿದ್ದೇವೆ. ಸದ್ಯ ಮಹಾರಾಷ್ಟ್ರ ಸರ್ಕಾರ ಯಾವ ಉದ್ದೇಶಕ್ಕೆ, ಏನು ಜಾರಿ ಮಾಡಿದೆ ನೋಡಿಕೊಂಡು ಹೆಜ್ಜೆ ಇಡುತ್ತೇನೆ’ ಎಂದರು.


Spread the love

About Laxminews 24x7

Check Also

ಯೋಧ ರವಿ ತಳವಾರ ಅಂತಿಮ ಯಾತ್ರೆ

Spread the love ಬೆಳಗಾವಿ: ನಾಗಾಲ್ಯಾಂಡ್​​ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಜಿಲ್ಲೆಯ ಯೋಧನ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ