Breaking News

ಸೋಮಣ್ಣ ನಮ್ಮ ಜೊತೆಯೇ ಇರುತ್ತಾರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Spread the love

ಹುಬ್ಬಳ್ಳಿ: ‘ಸಚಿವ ವಿ. ಸೋಮಣ್ಣ ನಮ್ಮ ಜೊತೆನೆ ಇದ್ದಾರೆ. ಮುಂದೆಯೂ ಜೊತೆಗೇ ಇರುತ್ತಾರೆ. ಯಾವುದೇ ಊಹಾಪೋಹ ಬೇಡ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

ಸೋಮವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ವಿ. ಸೋಮಣ್ಣ ಅವರ ಜೊತೆ ನಿನ್ನೆ ಹುಬ್ಬಳ್ಳಿಯಲ್ಲಿ ಯಾವುದೇ ಮಾತುಕತೆ ನಡೆದಿಲ್ಲ.

ನಮ್ಮ ಭೇಟಿ ಕೇವಲ ಔಪಚಾರಿಕ’ ಎಂದರು.

‘ಒಂದಿಷ್ಟು ಯೋಜನೆಗಳ ಕ್ರೆಡಿಟ್ ಪಡೆಯಲು ಕೆಲವರು ಮುಂದಾಗಿದ್ದಾರೆ. ಕ್ರೆಡಿಟ್ ವಾರ್ ಸಹಜ. ಪಕ್ಕದ ಮನೆಯವರು ಗಂಡು ಹಡೆದರೆ, ಇವರು ಸಿಹಿ ಹಂಚುತ್ತಾರೆ’ ಎಂದು ವಿರೋಧ ಪಕ್ಷಗಳಿಗೆ ಬೊಮ್ಮಾಯಿ ಟಾಂಗ್ ನೀಡಿದರು.

‘ಬಿಜೆಪಿಗೆ ಮೋದಿ ದೇವರು’ ಎನ್ನುವ ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ‘ನಾವು ಮೋದಿ ಅವರನ್ನು ಎಂದಿಗೂ ದೇವರು ಅಂದಿಲ್ಲ. ಅವರು ಸಹ ತಮ್ಮನ್ನು ದೇವರು ಅಂದುಕೊಂಡಿಲ್ಲ. ಅವರೊಬ್ಬ ಮಹಾನ್ ನಾಯಕ. ಅತ್ಯಂತ ಕಷ್ಟ ಕಾಲದಲ್ಲಿ ಗಡಿಯಲ್ಲಿ ಭದ್ರತೆ ಮತ್ತು ಆಂತರಿಕ ಸುರಕ್ಷತೆ ಸುಭದ್ರತೆ ಹೆಚ್ಚಿಸಿದ ಆಪತ್ಬಾಂಧವ’ ಎಂದು ಹೇಳಿದರು.

‘ರಾಜ್ಯದಲ್ಲಿ ಮೋದಿ ಸುನಾಮಿ ಎದ್ದಿದೆ. ಅವರು ರಾಜ್ಯದ ಹಲವೆಡೆ ಪ್ರಚಾರ ಮಾಡಿರುವುದರಿಂದ ಬಿಜೆಪಿ ಪರ ಒಲವು ಹೆಚ್ಚಾಗಿದೆ’ ಎಂದರು.

ಹೆಸ್ಕಾಂ ಮತ್ತು ಕೆಪಿಟಿಸಿಎಲ್ ಮುಷ್ಕರ ಕುರಿತು ಮಾತನಾಡಿದ ಅವರು, ‘ಇಂಧನ ಸಚಿವರು ನೌಕರರ ಸಂಘ‌ ಮತ್ತು ಒಕ್ಕೂಟದ ಸಂಪರ್ಕದಲ್ಲಿದ್ದು, ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ. ಕೂಡಲೇ ಅವರ ಸಮಸ್ಯೆಯನ್ನು ಬಗೆಹರಿಸಲಾಗುವುದು’ ಎಂದು ಭರವಸೆ ನೀಡಿದರು.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ