Breaking News

ಬೆಳಗಾವಿ: ‘ಜನಪದರು ವಿದ್ವಾಂಸರಿಗಿಂತ ಜ್ಞಾನಿಗಳು

Spread the love

ಬೆಳಗಾವಿ: ‘ಜನಪದರು ವಿದ್ವಾಂಸರಿಗಿಂತ ಜ್ಞಾನವಂತರು. ಅವರು ರೂಪಕ, ಪ್ರತಿಮೆಗಳನ್ನು ಬಹು ಸೊಗಸಾಗಿ ದೈನಂದಿನ ಬದುಕಿನಲ್ಲಿ ಬಳಸುತ್ತಲೇ ಬಂದಿರುವರು. ಅವುಗಳನ್ನೇ ನಾವು ನಾಟಕ, ಸಾಹಿತ್ಯ, ಕಲೆಗಳಲ್ಲಿ ಪುನಃ ರಚಿಸಿ ಹಣ, ಪ್ರಶಸ್ತಿಗಳನ್ನು ಪಡೆಯುತ್ತೇವೆ.

ಆದರೆ ನಿಜವಾದ ಕಲಾವಿದರಾದ ಅವರು ಮಾತ್ರ ಸರ್ಕಾರದ ಸಹಾಯ ಧನಕ್ಕೆ ಕೈಚಾಚಿ ನಿಲ್ಲುವಂಥ ಪರಿಸ್ಥಿತಿ ಇರುವುದು ದುರಂತ’ ಎಂದು ನಾಟಕಕಾರ ಡಿ.ಎಸ್.ಚೌಗಲೆ ಬೇಸರ ವ್ಯಕ್ತಪಡಿಸಿದರು.

ಇಲ್ಲಿಯ ಮಹಿಳಾ ಅಭಿವೃದ್ಧಿ ಮತ್ತು ಸೇವಾ ಸಂಸ್ಥೆ, ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ‘ಸಾಂಸ್ಕೃತಿಕ ಉತ್ಸವ’ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

‘ಕಲೆ, ರಂಗಭೂಮಿ, ಸಾಹಿತ್ಯವು ಆಯಾ ಕಾಲಘಟ್ಟಕ್ಕೆ ಸ್ಪಂದಿಸಿ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ಮೂಲಕ ಪ್ರಭುತ್ವವನ್ನು ಎಚ್ಚರಿಸುತ್ತಲೇ ಬಂದಿರುತ್ತದೆ. ಆದರೆ ವರ್ತಮಾನದಲ್ಲಿ ಹಾಗೇನೂ ಜರುಗದೇ ಪ್ರಶಸ್ತಿ, ಪುರಸ್ಕಾರ, ಸ್ಥಾನಮಾನಗಳಿಗಾಗಿ ಸೃಜನಶೀಲರು ಜಾನ ಮೌನ ವಹಿಸಿದ್ದಾರೆ’ ಎಂದು ಬೇಸರಿಸಿದರು.

‘ರಾಜ್ಯದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಚಟುವಟಿಕೆಗಳನ್ನು ಗಮನಿಸಿದರೆ ಬೆಳಗಾವಿ ಮತ್ತು ಜಿಲ್ಲೆಯ ಕೆಲವು ಪ್ರದೇಶಗಳನ್ನು ಹೊರತು ಪಡಿಸಿ ಒಂದು ಸಾಂಸ್ಕೃತಿಕ ನಿರ್ವಾತ ಸೃಷ್ಟಿಯಾಗಿದೆ’ ಎಂದರು.

ನಿವೃತ್ತ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ಅಧ್ಯಕ್ಷತೆ ವಹಿಸಿದ್ದರು. ಸಿದ್ದಣ್ಣ ಮೇಟಿ, ರಮೇಶ ಸೊಂಟಕ್ಕಿ, ಡಾ.ವೈ.ಬಿ.ಹಿಮ್ಮಡಿ, ಅಶೋಕ ಚಂದರಗಿ, ಶಂಕರ ಬಾಗೇವಾಡಿ ವೇದಿಕೆ ಮೇಲಿದ್ದರು. ಸುನೀತಾ ದೇಸಾಯಿ ನಿರೂಪಿಸಿದರು.


Spread the love

About Laxminews 24x7

Check Also

ಕಬ್ಬಿಗೆ ₹3300 ದರ – ವಿಜಯಪುರದಲ್ಲಿ ಗೊಂದಲ: ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟನೆ*

Spread the loveಕಬ್ಬಿಗೆ ₹3300 ದರ – ವಿಜಯಪುರದಲ್ಲಿ ಗೊಂದಲ: ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟನೆ* ರಾಜ್ಯ ಸರ್ಕಾರ ಕಬ್ಬಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ