Breaking News

ಚುನಾವಣಾ ಆಯೋಗವು ಅಧಿಕಾರದಲ್ಲಿರುವ ‘ಗುಲಾಮ’; ಉದ್ಧವ್ ಠಾಕ್ರೆ ಟೀಕೆ

Spread the love

ಮುಂಬೈ: ಪಕ್ಷದ ಚಿಹ್ನೆ ಮತ್ತು ಹೆಸರನ್ನು ಕಳೆದುಕೊಂಡು ಕೆರಳಿರುವ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ, ಮತ್ತೊಮ್ಮೆ ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ. ಚುನಾವಣಾ ಆಯೋಗವನ್ನು ಅಧಿಕಾರದಲ್ಲಿರುವವರ ‘ಗುಲಾಮ’ ಎಂದು ಕರೆದಿದ್ದಾರೆ.

 

“ನೀವು (ಚುನಾವಣಾ ಆಯೋಗ) ನಮ್ಮಿಂದ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಕಿತ್ತುಕೊಂಡಿದ್ದೀರಿ, ಆದರೆ ನೀವು ನನ್ನಿಂದ ಶಿವಸೇನೆಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ” ಎಂದು ರತ್ನಗಿರಿ ಜಿಲ್ಲೆಯ ಖೇಡ್‌ನಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಉದ್ಧವ್ ಹೇಳಿದರು.

ಭಾರತೀಯ ಜನತಾ ಪಕ್ಷವು ರಾಜಕೀಯವಾಗಿ ‘ಅಸ್ಪೃಶ್ಯ’ ವಾಗಿದ್ದಾಗ ಅದರೊಂದಿಗೆ ನಿಂತವರು ಬಾಳ್ ಠಾಕ್ರೆ ಎಂದು ಅವರು ಹೇಳಿದರು. ಅಲ್ಲದೆ ಠಾಕ್ರೆ ಹೆಸರು ಉಲ್ಲೇಖಿಸದೆ ಕೇವಲ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಮಹಾರಾಷ್ಟ್ರದಲ್ಲಿ ಮತ ಕೇಳಲು ಸಾಧ್ಯವೇ ಎಂದು ಸವಾಲೆಸೆದರು.

ಚುನಾವಣಾ ಆಯೋಗದ ನಿರ್ಧಾರವನ್ನು ತಾನು ಒಪ್ಪಿಕೊಂಡಿಲ್ಲ ಎಂದು ಠಾಕ್ರೆ ಹೇಳಿದ್ದಾರೆ.

ಚುನಾವಣಾ ಆಯೋಗವು ಕಣ್ಣಿನ ಪೊರೆಯಿಂದ ಪರದಾಡುತ್ತಿದೆ. ಇಲ್ಲವಾದರೆ ಅದು ಬಂದು ಇಲ್ಲಿನ ಪರಿಸ್ಥಿತಿಯನ್ನು ನೋಡಬೇಕು’ ಎಂದು ಪುನರುಚ್ಚರಿಸಿದರು.

ಬಿಜೆಪಿಯು ಶಿವಸೇನೆಯನ್ನು ಕ್ರೂರವಾಗಿ ಮುಗಿಸಲು ಪ್ರಯತ್ನಿಸುತ್ತಿದೆ ಆದರೆ ಅದು ಯಶಸ್ವಿಯಾಗುವುದಿಲ್ಲ ಎಂದು ಉದ್ಧವ್ ಠಾಕ್ರೆ ಹೇಳಿದರು. ಶಿವಸೇನೆಯನ್ನು ನಾಶಪಡಿಸುವ ಕ್ರಮವು ಮರಾಠಿಗರು ಮತ್ತು ಹಿಂದೂಗಳ ಐಕ್ಯತೆಯ ಮೇಲಿನ ದಾಳಿಯಂತಿದೆ ಎಂದು ಅವರು ಹೇಳಿದ್ದಾರೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ