ಹುಬ್ಬಳ್ಳಿ: ಭ್ರಷ್ಟಾಚಾರದ ಕೂಪ ಕಾಂಗ್ರೆಸ್, ಅವರು ಮಾಡಿರುವ ಕರ್ಮಕಾಂಡ ಒಂದಾ ಎರಡೇ. ಕಾಂಗ್ರೆಸ್ ಪಕ್ಷವೇ ಬಂದಾಗುತ್ತಿದೆ. ಇಂತಹ ಪ್ರತಿಭಟನೆ ಮೂಲಕ ಮುಂದಿನ ಚುನಾವಣೆ ನಡೆಸಬೇಕು ಎಂದುಕೊಂಡಿದ್ದಾರೆ. ಜನರು ಬಹಳ ಬುದ್ಧಿವಂತರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ವಿರುಪಾಕ್ಷಪ್ಪ ಮಾಡಾಳ ಅವರ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕೀಯ ಅಸ್ತಿತ್ವಕ್ಕಾಗಿ ಬಂದ್ ಗೆ ಕರೆ ಕೊಟ್ಟಿದ್ದಾರೆ. ಆರೋಪ ಮಾಡುವವರು ಮೊದಲು ಶುದ್ಧ ಹಸ್ತರಾಗಿರಬೇಕು ಆಗ ಅವರ ಮಾತಿಗೆ ಬೆಲೆ ಬರುತ್ತದೆ ಎಂದು ರಾಜ್ಯ ಬಂದ್ ಗೆ ಕರೆ ನೀಡಿರುವ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.