ಬಾಗಲಕೋಟೆ: ತಾಯಿ ಮತ್ತು ಮಗ ಒಂದೇ ದಿನ ಪ್ರಾಣ ಬಿಡುವ ಮೂಲಕ ಸಾವಿನಲ್ಲೂ ಒಂದಾಗಿದ್ದಾರೆ. ಈ ಹೃದಯ ಕಲಕುವ ಘಟನೆ ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ನಡೆದಿದೆ.
ಕಲಾದಗಿ ಗ್ರಾಮದ ಸ್ಥಳೀಯ ಮುಖಂಡ ದಶರಥ ದುರ್ವೆ(60) ಅನಾರೋಗ್ಯದಿಂದ ಶುಕ್ರವಾರ ಮಧ್ಯಾಹ್ನ ಸ್ವಗೃಹದಲ್ಲಿ ಸಾವನ್ನಪ್ಪಿದ್ದಾರೆ.
ಇತ್ತ ಮಗನ ಸಾವಿನ ಸುದ್ದಿ ತಿಳಿದು ದುಃಖಕ್ಕೀಡಾಗಿದ್ದ ಅವರ ತಾಯಿ ಶಾವಕ್ಕ ದುರ್ವೆ(90) ಶುಕ್ರವಾರ ಸಂಜೆ 6.30ರ ಸುಮಾರಿಗೆ ಹೃದಯಾಘಾತದಿಂದ ಪ್ರಾಣ ಬಿಟ್ಟಿದ್ದಾರೆ.
Laxmi News 24×7