Breaking News

‘ಕಾಂಗ್ರೇಸ್ ಪಕ್ಷದಲ್ಲಿ ದುಡ್ಡುಕೊಟ್ಟು ಜನ್ರು ಸೇರಿಸುವ ಪರಂಪರೆ ಇಲ್ಲಾ’

Spread the love

ಯಾದಗಿರಿ : ಕಾಂಗ್ರೇಸ್ ಪಕ್ಷದಲ್ಲಿ ದುಡ್ಡುಕೊಟ್ಟು ಜನ್ರು ಸೇರಿಸುವ ಪರಂಪರೆ ಇಲ್ಲಾ. ಬಿಜೆಪಿಯವರ ಬಗ್ಗೆ ಮಾತನಾಡುವಾಗಿನ ವಿಡಿಯೋ ಅದಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ವಿಡಿಯೋ ವೈರಲ್ ಗೆ ಸಂಬಂಧಿಸಿದಂತೆ ಪ್ರಕ್ರಿಯೆ ನೀಡಿದ್ದಾರೆ.

 

ಈ ಬಗ್ಗೆ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಮುಗಂದಪೂರ ಗ್ರಾಮದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದಸತೀಶ್ ಜಾರಕಿಹೊಳಿ, ಮಾರ್ಚ್ 5ರಂದು ಜೆಡಿಎಸ್ ಶಾಸಕರೊಬ್ಬರು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಾರೆ. ನಂತರ ಹಂತ ಹಂತವಾಗಿ ಜೆಡಿಎಸ್ ಕೆಲವು ಶಾಸಕರು ಕಾಂಗ್ರೆಸ್ ಸೇರ್ತಾರೆ.ಕೆಪಿಸಿಸಿ ಅಧ್ಯಕ್ಷರು ಅವರ ಹೆಸರನ್ನು ಘೋಷಣೆ ಮಾಡುತ್ತಾರೆ ಎಂದು ಹೇಳಿದ್ದಾರೆ.

 

ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಬಸ್ ನಲ್ಲಿ 500 ರೂ. ಕೊಟ್ಟು ಸಮಾವೇಶಕ್ಕೆ ಜನರನ್ನು ಸೇರಿಸುವಸಿದ್ದರಾಮಯ್ಯಹೇಳಿಕೆ ವೈರಲ್ ವೀಡಿಯೋ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಪಕ್ಷದವರ ಕುರಿತು ಮಾತನಾಡುವ ಸಂದರ್ಭದಲ್ಲಿರುವ ಹೇಳಿರುವ ವೀಡಿಯೋ ಇರಬಹುದು. ನಮ್ಮವರು ಯಾರು ಕೂಡ ದುಡ್ಡು ಕೊಡುವ ಪ್ರಯತ್ನ ಮಾಡಿಲ್ಲ. ಗಾಡಿ ಕೊಡುತ್ತೇವೆ, ಊಟ ಕೊಡುತ್ತೇವೆ ಅದು ಸಾಮಾನ್ಯ. ದುಡ್ಡು ಕೊಡುವ ಪ್ರಶ್ನೆಯೇ ಇಲ್ಲಿ ಬರಲ್ಲ. ಶಿವಮೊಗ್ಗ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮದಲ್ಕಿನ ವೀಡಿಯೋ ವೈರಲ್ ಆಗಿದೆ. ಬಿಜೆಪಿ‌ ಅವರು ದುಡ್ಡು ಕೊಟ್ಟಿಲ್ಲ‌ ಅಂತಾ ಬೇರೆ ಕಡೆ ಅದು ಕಂಪ್ಲೇಟ್ ಆಗಿದೆ. ಆದ್ದರಿಂದ ಕಾಂಗ್ರೆಸ್ ನಲ್ಲಿ ಆ ಪರಂಪರೆ ಇಲ್ಲ. ಬಿಜೆಪಿ ಅವ್ರದು ಮಾತನಾಡುವ ವೇಳೆಯಲ್ಲಿನ ಆ ವೀಡಿಯೋ ಇದು ಇರಬಹುದು ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ