ಬೆಂಗಳೂರು: ಕಂದಾಯ ಇಲಾಖೆಯಲ್ಲಿ ಕಾವೇರಿ ತಂತ್ರಾಶ 2.0 ಜಾರಿಗೆ ತಂದಿದ್ದು, ಏಳರಿಂದ ಹತ್ತು ನಿಮಿಷಗಳಲ್ಲಿ ಆಸ್ತಿನೋಂದಣಿ ಮುಗಿಯಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾವೇರಿ 2.0ತಂತ್ರಾಂಶದ ಕುರಿತು ಮಾತನಾಡಿದ ಸಚಿವರು, ಈ ತಂತ್ರಾಂಶವಿನೂತನ, ನಾಗರೀಕ ಸ್ನೇಹಿಯಾಗಿದೆ.
ಮಧ್ಯವರ್ತಿಗಳ ಹಾವಳಿ ಕಡಿಮೆ ಆಗಲಿದೆ. ವರ್ಷದೊಳಗೆ ಕೈಯಲ್ಲಿ ಅರ್ಜಿ ಹಾಕುವುದನ್ನು ತಪ್ಪಿಸಿ, ಆನ್ ಲೈನ್ ಮಾಡುತ್ತೇವೆ. ಎಲ್ಲಾ ಜಿಲ್ಲೆಗಳಲ್ಲಿ ಮೂರು ತಿಂಗಳಲ್ಲಿ ಎಲ್ಲಾ ಕಡೆ ಪ್ರಾರಂಭವಾಗಲಿದೆ. ಆಸ್ತಿ, ವಿವಾಹ ಸೇರಿದಂತೆ ಕಂದಾಯ ಇಲಾಖೆಯ ಎಲ್ಲಾರೀತಿಯ ನೋಂದಣಿಗಳು ಆನ್ ಲೈನ್ ಮಾಡಲಾಗುವುದು ಎಂದರು.
ನೋಂದಣಿ ಮಾಡುವ ಮೊದಲು, ಮನೆಯಲ್ಲೇ ಕುಳಿತು ಡೀಡ್ ಅನ್ನು ಉಪನೋಂದಣಾಕಾರಿ ಕಚೇರಿಗೆ ಕಳಿಸಿದರೆ ಅದರಲ್ಲಿ ಉಪನೋಂದಣಾಧಿಕಾರಿ ತಪ್ಪಿದ್ದರೆ ತಿದ್ದಿ ಕಳುಹಿಸುತ್ತಾರೆ. ಬಳಿಕ ಎಲ್ಲವೂ ಸರಿಯಾಗಿದ್ದರೆ ನಿಗದಿತ ಹಣ ಕಟ್ಟಲು ಸೂಚನೆ ಸೂಚಿಸುತ್ತಾರೆ. ಎಲ್ಲವೂ ಸರಿಯಾದ ಬಳಿಕ ಸ್ಲಾಟ್ ಬುಕ್ ಮಾಡಲಾಗುವುದು. ಆ ಸಮಯದಲ್ಲಿ ಹೋಗಿ, ಮುಖ, ಸಹಿ, ಹೆಬ್ಬೆಟ್ಟು ಹಾಕಿ ನೋಂದಣಿ ಮಾಡಿಸಿಕೊಳ್ಳಬಹುದು. ಇದರಿಂದ ಡೇಟಾ ಎಂಟ್ರಿ ಕಡಿಮೆ ಆಗಲಿದೆ. ಅನ್ ಲೈನ್‍ಲ್ಲೇ ಇ.ಸಿ ಮತ್ತು ಪ್ರಮಾಣಪತ್ರ ಪಡೆಯಬಹುದು ಎಂದು ಹೇಳಿದರು.
ಕಾವೇರಿ ತಂತ್ರಜ್ಞಾನ 2.0 ಕ್ರಾಂತಿಕಾರಿ ಬದಲಾವಣೆ ತರುತ್ತಿದೆ. ಇದನ್ನು ಬೆಳಗಾವಿ ದಕ್ಷಿಣ, ಚಿಂಚೋಳಿಯಲ್ಲಿ ಪ್ರಾಯೋಗಿಕವಾಗಿ ಮಾಡಲಾಗಿದೆ. ಡಿ.ಡಿ ಮತ್ತು ಚಲನ್ ಹಿಂದೆ ಸ್ಕ್ಯಾಮ್ ಆಗಿತ್ತು. ಯಾರೊದ್ದೋ ಹೆಸರಿಗೆ ಡಿ.ಡಿ ಹೋಗುತ್ತಿತ್ತು. ಈಗ ಅವರ ಬ್ಯಾಂಕ್ ಅಕೌಂಟಿಂದ ನೇರವಾಗಿ ಇಲಾಖೆ ಖಾತೆಗೆ ವರ್ಗಾವಣೆ ಆಗಲಿದೆ. ಸರ್ವರ್ ಸಮಸ್ಯೆ ಕೂಡ ಇರೋದಿಲ್ಲ. ಉಪನೋಂದಣಾಕಾರಿ ಕಚೇರಿಯಲ್ಲಿ ಜನರ ಗುಂಪು ಕೂಡ ಇರೋದಿಲ್ಲ. ಅವರ ಸಮಯದಲ್ಲಿ ಬಂದು ಹೋಗಬಹುದು. ಮದ್ಯವರ್ತಿಗಳ ಹಾವಳಿ ಇರೋದಿಲ್ಲ. ಕಾರ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಉಪನೋಂದಣಾಕಾರಿ ಇನ್ನು ಮುಂದೆ ಪಾಸ್ ಪೋರ್ಟ್ ಕಚೇರಿ ರೀತಿ ಕಾರ್ಯ ನಿರ್ವಹಿಸಲಿದೆ. ಲಿಫ್ಟ್, ವಿಕಲಚೇತನರ ರ್ಯಾಂಪ್ ಎಲ್ಲವೂ ಇರಲು ಸೂಚಿಸಲಾಗಿದೆ. ವಿವಿಧ ಕಚೇರಿಗಳಲ್ಲಿ ಇದನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
Laxmi News 24×7