ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರ ಮಾತೋಶ್ರೀ ನಿಧನಗುರುವಾರದಂದು ಮುಂ. ೧೦ ಗಂಟೆಗೆ ಅಂತ್ಯಕ್ರಿಯೆ.
ಗೋಕಾಕ್- ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರ ಮಾತೋಶ್ರೀ ಗಂಗವ್ವ ಲಕ್ಷ್ಮಣ ಶೇಖರಗೋಳ (೮೨) ಅವರು ಬುಧವಾರ ದಿ. ೧.೩.೨೦೨೩ ರಂದು ಸಂಜೆ ೭.೪೫ ಗಂಟೆಗೆ ಅನಾರೋಗ್ಯದಿಂದ ನಿಧನರಾದರು.
ಮೃತರಿಗೆ ಮೂವರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವಿದೆ.
ಮೃತರ ಅಂತ್ಯಕ್ರಿಯೆಯು ನಾಳೆ ಗುರುವಾರದಂದು ಮುಂಜಾನೆ ೧೦ ಗಂಟೆಗೆ ನಗರದ ಕುಂಬಾರ ಓಣಿ ( ಭಗತ್ ಸಿಂಗ್ ಸರ್ಕಲ್)
ಯಲ್ಲಿರುವ ರುದ್ರಭೂಮಿಯಲ್ಲಿ ಜರುಗಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೃತರ ನಿಧನಕ್ಕೆ ಶಾಸಕರಾದ ರಮೇಶ ಜಾರಕಿಹೊಳಿ, ಸತೀಶ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಎಲ್ ಇ ಟಿ ಸಂಸ್ಥೆಯ ಚೇರಮನ್ ಡಾ. ಭೀಮಶಿ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ, ಕಾರ್ಮಿಕ ಧುರೀಣ ಅಂಬಿರಾವ್ ಪಾಟೀಲ, ಗಂಗಾಮತಸ್ಥ ಸಮಾಜದ ಸಕಲ ಬಾಂಧವರು ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.