ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದ 30ನೇ ಆರೋಪಿಯಾದ ಪೊಲೀಸ್ ಇಲಾಖೆಯ ಕೇಂದ್ರ ಕಚೇರಿಯ ಸೂಪರಿಂಟೆಂಡೆಂಟ್ ಆರ್.ಮಂಜುನಾಥ್ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಆರ್.ಮಂಜುನಾಥ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಕೆ.ನಟರಾಜನ್ ಏಕಸದಸ್ಯ ಪೀಠ ಮಂಗಳವಾರ ಪ್ರಕಟಿಸಿತು.
‘ಅಭ್ಯರ್ಥಿ ಯಶವಂತಗೌಡ ಲಿಖಿತ ಪರೀಕ್ಷೆ ಬರೆದ ನಂತರ ಬಳಸಿದ್ದ ಪೆನ್ನಿನಲ್ಲೇ ಒಎಂಆರ್ ಶೀಟ್ ತಿದ್ದಲು ಸಹಾಯ ಮಾಡಿದ ಆರೋಪವನ್ನು ಆರ್.ಮಂಜುನಾಥ್ ಎದುರಿಸುತ್ತಿದ್ದಾರೆ.
Laxmi News 24×7