Breaking News

ರೂಪಾ-ರೋಹಿಣಿ ಕಿತ್ತಾಟದಲ್ಲಿ ಪ್ರತಾಪ ಸಿಂಹ ಎಂಟ್ರಿ.. IPS​ ಅಧಿಕಾರಿ ಪರ ಬ್ಯಾಟ್..!

Spread the love

ಮೈಸೂರು: ಐಪಿಎಸ್ ಅಧಿಕಾರಿ ಡಿ.ರೂಪಾ ಮತ್ತು ಐಎಎಸ್​ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಕಿತ್ತಾಟ ಸಂಬಂಧ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ. ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ಅವರು ಐಪಿಎಸ್ ಅಧಿಕಾರಿ ರೂಪಾ ಅವರು ಎತ್ತಿರುವ ಪ್ರಶ್ನೆಗಳನ್ನು ಕೂಲಂಕುಶವಾಗಿ ನೋಡಿದೆ.

ಎಲ್ಲಾ ಪ್ರಶ್ನೆಗಳು ವಾಸ್ತವಕ್ಕೆ ಹತ್ತಿರವಾಗಿವೆ ಎಂದಿದ್ದಾರೆ.

ಅದಕ್ಕೆ‌ ಸಂಬಂಧಪಟ್ಟವರು ಉತ್ತರ ನೀಡಬೇಕು. ರಾಜಕಾರಣಿಗಳ ವಿರುದ್ಧ ಬಂದಾಗ ಪ್ರಶ್ನೆ ಮಾಡುತ್ತಾರೆ. ಆದರೆ ಇವಾಗ ಆ ವಿಚಾರಕ್ಕೆ ಸಂಬಂಧಿಸಿದಂತೆ ರೋಹಿಣಿ ಅವರು ಪ್ರತಿಕ್ರಿಯೆ ನೀಡಬೇಕು. ಸೋಶಿಯಲ್ ಮೀಡಿಯಾದಲ್ಲಿ ನನ್ನ ಮೇಲೆ ಆರೋಪ ಮಾಡಿದ್ದರು.

ಈಗಲಾದರೂ ಕ್ಷಮೆಯಾಚಿಸಲಿ

ಈ ಹಿಂದೆ ರೋಹಿಣಿ ಅವರು ಮಾತಿಗೆ ಮರುಳಾಗಿ ನನ್ನನ್ನ ಟಾರ್ಗೆಟ್ ಮಾಡಲಾಗಿತ್ತು. ನನ್ನನ್ನ ಅಪಮಾನಿಸಿದವರು ಈಗಲಾದರೂ ಕ್ಷಮೆಯಾಚಿಸಲಿ. ಮಾಧ್ಯಮಗಳಲ್ಲಿ ನನ್ನನ್ನ ಅಪಮಾನಿಸಿದ್ದರು. ರೂಪಾ‌ ಅವರು ಹೇಳಿರುವ ವಿಷಯವನ್ನ ಹೆಕ್ಕಿ ತೆಗೆಯಿರಿ. ಸಂಧಾನ ಯಾರು ಮಾಡಿಕೊಳ್ಳುತ್ತಾರೆ? ತಪ್ಪೆಸಗಿದವರು ಮಾತ್ರ ಸಂಧಾನಕ್ಕೆ ಹೋಗುತ್ತಾರೆ ಎಂದು ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.


Spread the love

About Laxminews 24x7

Check Also

ಆನ್‌ಲೈನ್ ಗೇಮಿಂಗ್ ಪ್ರಚಾರ-ನಿಯಂತ್ರಣ ಕಾಯಿದೆ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ: ಆ.30ಕ್ಕೆ ವಿಚಾರಣೆ

Spread the love ಬೆಂಗಳೂರು: ಹಣವನ್ನು ಪಣಕ್ಕಿಟ್ಟು ಆಡುವಂತಹ ಆನ್‌ಲೈನ್​ ಗೇಮ್​ಗಳಿಗೆ ನಿಷೇಧ ಹೇರುವುದಕ್ಕೆ ಅವಕಾಶ ಕಲ್ಪಿಸುವ ಆನ್‌ಲೈನ್ ಗೇಮಿಂಗ್ ಪ್ರಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ