ಹೆಂಡತಿಯೇ ಗಂಡನ (Wife) ಕೊಲೆಗೆ ಸುಪಾರಿ ಕೊಟ್ಟು ಆತನನ್ನು ಪರಲೋಕಕ್ಕೆ ಕಳುಹಿಸಿದ್ದಾಳೆ. ಇದರೊಂದಿಗೆ ಹುಟ್ಟುಹಬ್ಬದ ದಿನವೇ ಅನುಮಾನಸ್ಪದಾಗಿ ಸಾವನ್ನಪ್ಪಿದ್ದ ವ್ಯಕ್ತಿಯ ಪ್ರಕರಣವನ್ನು ಕುಣಿಗಲ್ ಪೊಲೀಸರು (Police) ಬೇದಿಸಿದ್ದು, ಪ್ರಕರಣದಲ್ಲಿ ಕೊಲೆದ ವ್ಯಕ್ತಿಯ ಪತ್ನಿ ಸೇರಿದಂತೆ ಮೂವರನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಏನಿದು ಪ್ರಕರಣ?
ಫೆಬ್ರವರಿ 03 ರಂದು ಕುಣಿಗಲ್ ತಾಲೂಕಿನ ಸೀನಪ್ಪನಹಳ್ಳಿ ಗ್ರಾಮದ ಮಂಜುನಾಥ್ ಅನುಮಾನಸ್ಪದಾಗಿ ಸಾವನ್ನಪ್ಪಿದ್ದರು. ಮಂಜುನಾಥ್ ಮೃತದೇಹ ಗ್ರಾಮದ ಕಿತ್ನಾಮಂಗಲ ಕೆರೆಯ ಬಳಿ ಪತ್ತೆಯಾಗಿತ್ತು. ಅಂದು ತನ್ನ ಸ್ನೇಹಿತರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡು ಮನೆಗೆ ಬಂದಿದ್ದ ಮಂಜುನಾಥ್, ಮಧ್ಯರಾತ್ರಿ 12 ಸುಮಾರಿಗೆ ಯಾವುದೋ ಫೋನ್ ಬಂತು ಅಂತ ಮನೆಯಿಂದ ಹೊರ ಹೋಗಿದ್ದರಂತೆ.
ಆ ಬಳಿ ಎಷ್ಟೇ ಸಮಯವಾದರೂ ಆತನ ಮನೆಗೆ ವಾಪಸ್ ಆಗಿರಲಿಲ್ಲವಂತೆ. ಆದರೆ ಮರುದಿನ ಬೆಳಗ್ಗೆ ಆತನ ಮೃತದೇಹ ಗ್ರಾಮದಿಂದ ಒಂದು ಕಿಲೋಮೀಟರ್ ದೂರದ ಇರುವ ಕಿತ್ನಾಮಂಗಲ ಕೆರೆಯಲ್ಲಿ ಪತ್ತೆಯಾಗಿತ್ತು.