Breaking News

ಚುನಾವಣೆಯಲ್ಲಿ ಕರ್ನಾಟಕದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ: ಕೋಡಿಮಠದ ಶ್ರೀ

Spread the love

ಮಖಂಡಿ ಫೆಬ್ರವರಿ 4: ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ತಯಾರಿ ಭರದಿಂದ ಸಾಗುತ್ತಿದೆ.

ಇನ್ನೇನು ಚುನಾವಣಾ ಆಯೋಗದಿಂದ ದಿನಾಂಕ ಘೋಷಣೆಯಾಗುತ್ತಿದ್ದಂತೆ ಪ್ರಬಲ ಪಕ್ಷಗಳು ಪ್ರಚಾರ ಕಾರ್ಯಯವನ್ನು ಚುರುಕುಗೊಳಿಸಲಿವೆ. ಈ ನಡುವೆ ರಾಜಕೀಯ ಭವಿಷ್ಯ ನುಡಿಯುವುದರಲ್ಲಿ ಮುಂಚುಣಿಯಲ್ಲಿರುವ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿಗಳು ಮತ್ತೊಂದು ರಾಜಕೀಯ ಭವಿಷ್ಯ ನುಡಿದಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ. ಇದಕ್ಕೂ ಮುನ್ನ ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವಿತ್ತು. ಆದರೆ ಮೈತ್ರಿ ಸರ್ಕಾರ ಕೆಡವುದರ ಮೂಲಕ ಬಿಜೆಪಿ ಅಧಿಕಾರ ಪಡೆದುಕೊಂಡಿದೆ ಎನ್ನುವ ಕಿಚ್ಚು ಈ ಬಾರಿ ಹೊತ್ತಿ ಉರಿಯುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡೆಎಸ್ ಮೂರು ಪ್ರಬಲ ಪಕ್ಷಗಳ ನಡುವೆ ಭಾರೀ ಪೈಪೋಟಿ ನಡೆಯಲಿದೆ. ಈ ನಡುವೆ ಕೋಡಿಶ್ರೀಗಳು ನುಡಿದ ಭವಿಷ್ಯ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ.

ಕೋಡಿಶ್ರೀಗಳು ಹೇಳಿದ್ದು ಇಷ್ಟು-‘ರಾಜಕೀಯ ಅಸ್ಥಿರತೆ ಇದೆ. ಚುನಾವಣೆವರೆಗೂ ಪಕ್ಷಾಂತರಗಳು ಇರುತ್ತವೆ. ಪಕ್ಷಗಳು ಕೂಡಿ ಹೋಗುವುದು ಕಷ್ಟ. ಚುನಾವಣೆವರೆಗೂ ಏನು ಹೇಳುವುದಕ್ಕೆ ಆಘುವುದಿಲ್ಲ. ಎಲ್ಲ ಡಿವೈಡ್ ಆಗುವ ಲಕ್ಷಣ ಇದೆ. ಆದರೂ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ’ ಎಂದಿದ್ದಾರೆ.

ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ನಿನ್ನೆ ಮಾತನಾಡಿದ ಕೋಡಿ ಶ್ರೀಗಳು, ‘ಯುಗಾದಿ ನಂತರ ಪ್ರಕೃತಿ ವಿಕೋಪ ಆಗುತ್ತದೆ. ಆಗುವುದಿಲ್ಲ ಎಂದು ಹೇಳುವುದಿಲ್ಲ. ಮಾಡಬಾರದ್ದು ಮಾಡಿದರೆ ಆಗಬಾರದ್ದು ಆಗುತ್ತದೆ. ಯಾರೇ ಆಗಲಿ ತಪ್ಪು ಇರಲಿ ಸರಿ ಇರಲಿ. ಬಿತ್ತಿದ್ದೆ ಬೆಳುಯುವುದು. ನಾವು ಏನ್ ಬಿತ್ತುತ್ತೇವೆ ಅದೆ ಬೆಳೆಯುತ್ತದೆ. ಮಾರಬಾರದು ಮಾಡಿದರೆ ಆರಬಾರದ್ದು ಆಗುತ್ತದೆ’ ಎಂದು ಅವರು ಹೇಳಿದರು.

ಮತ್ತಷ್ಟು ಮಾತನಾಡಿದ ಕೋಡಿ ಶ್ರೀಗಳು,’ ಮುಂದೆ ಎಷ್ಟು ಸುಖವಿದೆಯೋ ಅಷ್ಟೇ ಕಷ್ಟವೂ ಇದೆ. ಒಲೆ ಹತ್ತಿ ಉರಿದರೆ ಆರಬಹುದು. ಆದರೆ ಧರೆ ಹೊತ್ತಿ ಉರಿದರೆ ಆರುವುದಿಲ್ಲ. ನಾನು ಹೇಳಿದ ಮರುದಿನವೇ ಪ್ಲೈಟ್ ಅಪಘಾತವಾಗಿದೆ. ಅದರಲ್ಲಿ ಐವತ್ತು ಜನ ಸತ್ತರು. ಯುಗಾದಿ ಬಂದ ನಂತರ ಎಲ್ಲಾ ಸವಿಸ್ತಾರವಾಗಿ ಹೇಳುತ್ತೇನೆ’ ಎಂದಿದ್ದಾರೆ.


Spread the love

About Laxminews 24x7

Check Also

ಗಾಂಧಿ ಅಧ್ಯಕ್ಷತೆಯ ಬೆಳಗಾವಿ ಕಾಂಗ್ರೆಸ್​ ಅಧಿವೇಶನದ ಶತಮಾನೋತ್ಸವ ಪ್ರತಿ ಕಾಂಗ್ರೆಸ್ಸಿಗನಿಗೂ ಹೆಮ್ಮೆ

Spread the loveಬೆಳಗಾವಿ: “1924ರ ಡಿಸೆಂಬರ್ 26ರಂದು ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಇಂದು ನಾವು ಆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ