Breaking News

ಬಿಜೆಪಿ ಸರ್ಕಾರ ಹೆಸರು ಬದಲಾವಣೆ ಬಿಟ್ಟರೆ ಏನೂ ಮಾಡಿಲ್ಲ.

Spread the love

ಬೀದರ್: ‘ಬಿಜೆಪಿ ಸರ್ಕಾರ ಹೆಸರು ಬದಲಾವಣೆ ಬಿಟ್ಟರೆ ಏನೂ ಮಾಡಿಲ್ಲ.

ಬಿಜೆಪಿಗೆ ಲೂಟಿ ಹೊಡೆಯುವುದು ಬಿಟ್ಟರೆ ಬೇರೆ ಕೆಲಸವಿಲ್ಲ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

‘ಬಿಜೆಪಿ ಸರ್ಕಾರ ಜನರ ರಕ್ತ ಹೀರಲು ಶುರು ಮಾಡಿದೆ. ಕಮಿಷನ್‌ ಕೊಡಲು ಸಾಧ್ಯವಾಗದೇ ಬೆಳಗಾವಿ, ಬೆಂಗಳೂರು, ತಮಕೂರಿನ ಗುತ್ತಿಗೆದಾರರು ಮೃತಪಟ್ಟರು. ಒಬ್ಬರು ದಯಾ ಮರಣ ಕೋರಿದರು. ಗುತ್ತಿಗೆದಾರರ ಸಂಘದವರು ನೇರವಾಗಿ ಪ್ರಧಾನಮಂತ್ರಿಗೆ ಪತ್ರ ಬರೆದರು. ಲಂಚ ಕೊಡದೆ ಯಾವ ಕೆಲಸವೂ ಆಗುತ್ತಿಲ್ಲ’ ಎಂದು ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.

ಲೋಕೋಪಯೋಗಿ, ಬಿಬಿಎಂಪಿ ಸೇರಿದಂತೆ ಸರ್ಕಾರದ ಎಲ್ಲ ಕಚೇರಿಗಳಲ್ಲೂ ಲಂಚದ ವ್ಯವಹಾರ ನಡೆಯುತ್ತಿದೆ. ವರ್ಗಾವಣೆ, ಬಡತಿ, ನೇಮಕಾತಿಗೂ ಲಂಚ ಕೇಳುತ್ತಿದ್ದಾರೆ. ಪೊಲೀಸ್‌ ಅಧಿಕಾರಿಯೇ ಜೈಲಿಗೆ ಹೋಗಿರುವುದು ಎಲ್ಲರಿಗೂ ತಿಳಿಸಿದೆ. ಬಿಜೆಪಿ ಸರ್ಕಾರ, ಅಲಿಬಾಬಾ ಹಾಗೂ 40 ಜನರ ಕಳ್ಳರ ಕೂಟದಂತೆ ಆಗಿದೆ’ ಎಂದು ಟೀಕಿಸಿದರು.


Spread the love

About Laxminews 24x7

Check Also

2000 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಹಣವಿಲ್ಲದೆ ಮಾಡಲು ಸಾಧ್ಯವೇ ?: ಮುಖ್ಯಮಂತ್ರಿ ಸಿದ್ದರಾಮಯ್ಯ*

Spread the love 2000 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಹಣವಿಲ್ಲದೆ ಮಾಡಲು ಸಾಧ್ಯವೇ ?: ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಕ್ಕಬಳ್ಳಾಪುರ(ಶಿಡ್ಲಘಟ್ಟ), …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ