Breaking News

ಮುರುಘಾ ಶ್ರೀ ವಿರುದ್ಧ ಷಡ್ಯಂತರ ಪ್ರಕರಣ; ತನಿಖೆ ವರ್ಗಾವಣೆ ಬಗ್ಗೆ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿದ ಹೈಕೋರ್ಟ್

Spread the love

ಬೆಂಗಳೂರು: ಚಿತ್ರದುರ್ಗದಮುರುಘಾ ಮಠದ ಶಿವಮೂರ್ತಿ ಶರಣರ(Murugha Mutt Sri Shivamurthy Murugha Sharanaru) ವಿರುದ್ಧ ಷಡ್ಯಂತ್ರ ರೂಪಿಸಿದ ಆರೋಪ ಸಂಬಂಧ ಪೊಲೀಸರು ಸಮರ್ಪಕ ತನಿಖೆ ನಡೆಸದೇ ಅಸಹಾಯಕರಾಗಿದ್ದಾರೆ. ಹೀಗಾಗಿ ಚಿತ್ರದುರ್ಗ ಗ್ರಾಮಾಂತರ ಠಾಣೆಯಿಂದ ತನಿಖೆ ವರ್ಗಾಯಿಸಲು ಕೋರಿ ಬಸವಪ್ರಭು ಸ್ವಾಮೀಜಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ (Karnataka High Court), ರಾಜ್ಯಸರ್ಕಾರದ ಪ್ರತಿಕ್ರಿಯೆ ಕೇಳಿ ಫೆಬ್ರವರಿ 6ಕ್ಕೆ ವಿಚಾರಣೆಯನ್ನು ಮುಂದೂಡಿತು. ಪೊಲೀಸರು ಸಮರ್ಪಕ ತನಿಖೆ ನಡೆಸದೆ ಅಸಹಾಯಕರಾಗಿದ್ದಾರೆ. ತನಿಖೆಯನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆಯಿಂದ ವರ್ಗಾಯಿಸಿ ಹಿರಿಯ ಮಹಿಳಾ ಪೊಲೀಸ್ ಅಧಿಕಾರಿಯಿಂದ ತನಿಖೆ ನಡೆಸುವಂತೆ ಬಸವಪ್ರಭು ಸ್ವಾಮೀಜಿ ರಿಟ್ ಅರ್ಜಿಯಲ್ಲಿ ಕೋರಿದ್ದರು.

ಮುರುಘಾ ಮಠದಲ್ಲಿ 47 ಫೋಟೋ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಠದ ಫೋಟೋ ಕಳ್ಳತನಕ್ಕೆ ಪ್ರಚೋದನೆ ಹಾಗೂ ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪದ ಮೇಲೆ ಬಸವರಾಜನ್‌ ಹಾಗೂ ಸೌಭಾಗ್ಯ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ನ.9 ರಂದು ದೂರು ದಾಖಲಾಗಿದ್ದು, ಮರುದಿನ ಅಂದರೆ ನ.10 ರಂದು ಬಸವರಾಜನ್‌ ಅವರನ್ನು ಬಂಧಿಸಲಾಗಿತ್ತು. ಆದರೆ, ಸೌಭಾಗ್ಯ ತಲೆ ಮರೆಸಿಕೊಂಡಿದ್ದರು. ಬಳಿಕ ಡಿಸೆಂಬರ್ 16ರಂದು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಸೌಭಾಗ್ಯ ಅವರನ್ನು ದಾವಣಗೆರೆಯಲ್ಲಿ ಬಂಧಿಸಿದ್ದರು.


Spread the love

About Laxminews 24x7

Check Also

ಫ್ರಾನ್ಸ್ ಕೈಟ್ ಉತ್ಸವದಲ್ಲಿ ಮಂಗಳೂರಿನ ಗಾಳಿಪಟ: ಫ್ರೆಂಚರ ನಾಡಿನಲ್ಲಿ ಹಾರಲಿದೆ ‘ಕುಡ್ಲದ ತೇರು

Spread the love ಮಂಗಳೂರು: ಬಾನಾಡಿಯಲ್ಲಿ ಹಕ್ಕಿಗಳಂತೆ ಹಾರಾಡುವ ಗಾಳಿಪಟ ಈಗ ಅಂತಾರಾಷ್ಟ್ರೀಯ ಹಬ್ಬವಾಗಿದೆ. ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸೆಪ್ಟಂಬರ್​ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ