Breaking News

ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮುರುಘರಾಜೇಂದ್ರಗೌಡ ಹಾಟ್ ಬಾಕ್ಸ್ ವಿತರಿಸುವ ಮೂಲಕ ಜನರನ್ನು ಓಲೈಸುತ್ತಿದ್ದಾರೆ.

Spread the love

ಬೆಳಗಾವಿ: ರಾಜ್ಯದಲ್ಲಿ ಎಲೆಕ್ಷನ್​ ಪ್ರಚಾರ ಭರ್ಜರಿಯಿಂದ ಸಾಗುತ್ತಿದೆ. ಪಕ್ಷಗಳು, ಟಿಕೆಟ್ ಆಕಾಂಕ್ಷಿಗಳು ತಮ್ಮ ಗೆಲುವಿಗಾಗಿ ಮತ ಬೇಟೆಗೆ ಇಳಿದಿವೆ. ಇಂಥಾ ಸಮಯಲ್ಲಿ ಕುಂದಾನಗರಿ ಬೆಳಗಾವಿ ಜಿಲ್ಲೆ ಜನರಿಗೆ ಭರಪೂರದ ಉಡುಗೊರೆ ಭಾಗ್ಯ ಸಿಕ್ಕಿದೆ. ರಾಜಕಾರಣಿಗಳು ಮತದಾರರ ಓಲೈಕೆಗಾಗಿ ವಿವಿಧ ಗಿಫ್ಟ್​​ ನೀಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

 

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಮುರುಘರಾಜೇಂದ್ರಗೌಡ ಹಾಟ್ ಬಾಕ್ಸ್ ವಿತರಿಸುವ ಮೂಲಕ ಜನರನ್ನು ಓಲೈಸುತ್ತಿದ್ದಾರೆ. ಅರಿಶಿಣ ಕುಂಕುಮ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿ ಮಹಿಳೆಯರಿಗೆ ಹಾಟ್ ಬಾಕ್ಸ್ ವಿತರಿಸಿದ್ದಾರೆ.

ಬೆಳಗಾವಿ ಮಹಾಂತೇಶ ನಗರದಲ್ಲಿ ಅರಿಶಿಣ ಕುಂಕುಮ ಕಾರ್ಯಕ್ರಮ ಆಯೋಜಿಸಿ ಗಿಫ್ಟ್ ವಿತರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗಿಯಾಗಿದ್ದರು. ಕಾರ್ಯಕ್ರಮಕ್ಕೆ ಬಂದವರಿಗೆ ಖಾಲಿ ಕೈಯಲ್ಲಿ ಕಳಿಸಬಾರದೆಂದು ಮುರುಘರಾಜೇಂದ್ರಗೌಡ ಗಿಫ್ಟ್ ವಿತರಿಸಿದ್ದಾರೆ. ಪತ್ನಿಯರನ್ನ ಮುಂದಿಟ್ಟುಕೊಂಡು ಕಾರ್ಯಕ್ರಮ ಆಯೋಜಿಸಿ ಗಿಫ್ಟ್ ವಿತರಿಸಿದ್ದಾರೆ.

ಈ ಮೊದಲು ಮತ ಬೇಟೆಗಾಗಿ ಕುಕ್ಕರ್, ಮಿಕ್ಸರ್, ತಟ್ಟೆ, ಲೋಟ, ಟಿಫಿನ್ ಬಾಕ್ಸ್ ನೀಡುತ್ತಿದ್ದರು. ಆದರೀಗ ಹಾಟ್ ಬಾಕ್ಸ್ ನೀಡುವ ಮೂಲಕ ಜನರನ್ನು ತಮ್ಮ ಪಕ್ಷಕ್ಕೆ ಮತ ನೀಡುವಂತೆ ಓಲೈಸುತ್ತಿದ್ದಾರೆ.

ಈಗಾಗಲೇ ಕಾಂಗ್ರೆಸ್, ಬಿಜೆಪಿ ನಾಯಕರಿಂದ ವೆರೈಟಿ ವೆರೈಟಿ ಗಿಫ್ಟ್ ವಿತರಿಸಿ ಜನರನ್ನು ತಮ್ಮ ಪಕ್ಷಕ್ಕೆ ವೋಟ್​ ನೀಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಇನ್ನೇನು ಚುನಾವಣೆಗೆ ಆರು ತಿಂಗಳು ಬಾಕಿ ಇರುವಾಗಲೇ ಗಿಫ್ಟ್​ ಪಾಲಿಟಿಕ್ಸ್​ ಪ್ರಾರಂಭವಾಗಿದೆ. ರಾಜಕಾರಣಿ ಒಂದೊಂದು ತರಹದ ಗಿಫ್ಟ್ ವಿತರಿಸುತ್ತಿರುವುದು ಬೆಳಕಿಗೆ ಬಂದಿದೆ.


Spread the love

About Laxminews 24x7

Check Also

ಫಿನಾಯಿಲ್ ಮಾರಾಟ ಮಾಡುತ್ತ ಚಿನ್ನದಂಗಡಿ ದೋಚಿದ್ದ ರಾಜಸ್ಥಾನಿ ಗ್ಯಾಂಗ್

Spread the loveಬೆಂಗಳೂರು : ಫಿನಾಯಿಲ್ ಸರಬರಾಜು ಮಾಡುತ್ತ ಚಿನ್ನದಂಗಡಿ ದೋಚಿದ್ದ ಐವರು ಆರೋಪಿಗಳನ್ನ ಕೆ. ಆರ್. ಪುರಂ ಠಾಣೆ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ