Breaking News

ಯಾವಾಗ ಆರಂಭವಾಗಲಿದೆ ಕ್ರಾಂತಿ ಬುಕಿಂಗ್ಸ್? ಮಲ್ಟಿಪ್ಲೆಕ್ಸ್ ಬುಕಿಂಗ್ ಯಾವಾಗ ಶುರು?

Spread the love

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಬಹು ನಿರೀಕ್ಷಿತ ಚಿತ್ರ ಕ್ರಾಂತಿ ಬಿಡುಗಡೆ ಸಮೀಪಕ್ಕೆ ಬಂದಿದೆ. ನೆಚ್ಚಿನ ನಟ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಚಿತ್ರವನ್ನು ಬರೋಬ್ಬರಿ 22 ತಿಂಗಳುಗಳ ಬಳಿಕ ಬೆಳ್ಳಿತೆರೆ ಮೇಲೆ ನೋಡಿ ಸಂಭ್ರಮಿಸಲು ದರ್ಶನ್ ಅಭಿಮಾನಿಗಳು ಕಾತರರಾಗಿದ್ದಾರೆ.

ಚಿತ್ರ ಮುಂದಿನ ವಾರದ ಗುರುವಾರದಂದೇ ಗಣರಾಜ್ಯೋತ್ಸವದ ಪ್ರಯುಕ್ತ ತೆರೆಗೆ ಬರಲಿದೆ.

ಚಿತ್ರತಂಡ ಹಾಡುಗಳು ಹಾಗೂ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ. ಟ್ರೈಲರ್ ವೀಕ್ಷಿಸಿದ ಅಭಿಮಾನಿಗಳು ಹಾಗೂ ಸಿನಿ ರಸಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಒಂದೊಳ್ಳೆ ಕಮರ್ಷಿಯಲ್ ಚಿತ್ರವನ್ನು ನಿರ್ದೇಶಕ ವಿ ಹರಿಕೃಷ್ಣ ನೀಡಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು. ಹೀಗೆ ನಿರೀಕ್ಷೆ ಹುಟ್ಟುಹಾಕಿರುವ ನೆಚ್ಚಿನ ನಟನ ಚಿತ್ರವನ್ನು ಬಹಳ ತಿಂಗಳುಗಳ ಬಳಿಕ ಚಿತ್ರಮಂದಿರದಲ್ಲಿ ವೀಕ್ಷಿಸಲು ಕಾತರರಾಗಿರುವ ಅಭಿಮಾನಿಗಳು ಚಿತ್ರದ ಮುಂಗಡ ಬುಕಿಂಗ್ ಯಾವಾಗ ಆರಂಭವಾಗಬಹುದು ಎಂದು ಕಾಯುತ್ತಿದ್ದಾರೆ.

ಚಿತ್ರತಂಡ ನಿನ್ನೆ ( ಜನವರಿ 20 ) ಚಿತ್ರದ ಬುಕಿಂಗ್ ಆದಷ್ಟು ಬೇಗ ಶುರುವಾಗಲಿದೆ ಎಂದು ತಿಳಿಸಿದ್ದು, ದಿನಾಂಕವನ್ನು ಪ್ರಕಟಿಸಿಲ್ಲ. ಆದರೆ ನಿನ್ನೆಯೇ ತಿಪಟೂರಿನ ಲಕ್ಷ್ಮಿ ಚಿತ್ರಮಂದಿರದಲ್ಲಿ ಮಾತ್ರ ಕ್ರಾಂತಿ ಚಿತ್ರದ ಮುಂಗಡ ಬುಕಿಂಗ್ ಆರಂಭಗೊಂಡಿದೆ. ರಾಜ್ಯದೆಲ್ಲೆಡೆ ಇದೊಂದೇ ಚಿತ್ರಮಂದಿರದಲ್ಲಿ ಕ್ರಾಂತಿ ಚಿತ್ರದ ಮುಂಗಡ ಬುಕಿಂಗ್ ತೆರೆದಿದ್ದು, ಉಳಿದ ಚಿತ್ರಮಂದಿರಗಳಲ್ಲಿ ಯಾವಾಗ ಮುಂಗಡ ಬುಕಿಂಗ್ ಆರಂಭವಾಗಲಿದೆ ಎಂದು ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ. ಈ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

ಭಾನುವಾರ ಬುಕಿಂಗ್ ಶುರು
 ಇನ್ನು ಕ್ರಾಂತಿ ಚಿತ್ರದ ಬೆಂಗಳೂರು ಹಾಗೂ ಇತರೆ ಪ್ರಮುಖ ನಗರ ಮತ್ತು ಪಟ್ಟಣಗಳ ಚಿತ್ರಮಂದಿರಗಳ ಮುಂಗಡ ಬುಕಿಂಗ್ ಇಂದು, ಶನಿವಾರ ( ಜನವರಿ 21 ) ಸಂಜೆ ಅಥವಾ ಭಾನುವಾರ ಬೆಳಗ್ಗೆ ಆರಂಭವಾಗುವ ಸಾಧ್ಯತೆ ಹೆಚ್ಚಿದೆ. ಮೊದಲಿಗೆ ಬೆಂಗಳೂರಿನ ಪ್ರಮುಖ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಬುಕಿಂಗ್ ಆರಂಭವಾಗಲಿದ್ದು, ಉಳಿದ ನಗರಗಳ ಸಿಂಗಲ್ ಸ್ಕ್ರೀನ್‌ಗಳ ಮುಂಗಡ ಬುಕಿಂಗ್ ಸಹ ಇದೇ ಸಮಯಕ್ಕೆ ಶುರುವಾಗಲಿದೆ.

ಮಲ್ಟಿಪ್ಲೆಕ್ಸ್ ಬುಕಿಂಗ್ ಯಾವಾಗ ಶುರು?

ಇನ್ನು ಕ್ರಾಂತಿ ಚಿತ್ರದ ಮಲ್ಟಿಪ್ಲೆಕ್ಸ್ ಬುಕಿಂಗ್ ಭಾನುವಾರ ಸಂಜೆ ವೇಳೆಗೆ ಆರಂಭವಾಗುವ ಸಾಧ್ಯತೆ ಹೆಚ್ಚಿದೆ. ಪಿವಿಆರ್ ಹಾಗೂ ಐನಾಕ್ಸ್ ರೀತಿಯ ನ್ಯಾಷನಲ್ ಮಲ್ಟಿಪ್ಲೆಕ್ಸ್ ಚೈನ್‌ಗಳಲ್ಲಿ ಕ್ರಾಂತಿ ಚಿತ್ರದ ಬುಕಿಂಗ್ ಸೋಮವಾರ ಆರಂಭವಾಗುವ ಸಾಧ್ಯತೆಗಳಿವೆ. ಒಟ್ಟಾರೆಯಾಗಿ ಜನವರಿ 23ರ ಸೋಮವಾರದಂದು ಕ್ರಾಂತಿ ಚಿತ್ರದ ಸಂಪೂರ್ಣ ಬುಕಿಂಗ್ ತೆರೆದಿರಲಿದೆ.

ಬೆಳಗಿನ ಜಾವ ಪ್ರದರ್ಶನಗಳು

ಇನ್ನು ಬೆಂಗಳೂರು, ಮೈಸೂರು, ಮಂಡ್ಯ, ತುಮಕೂರು, ಹುಬ್ಬಳ್ಳಿ ಹಾಗೂ ಇನ್ನಿತರ ಪ್ರಮುಖ ನಗರಗಳಲ್ಲಿ ಕ್ರಾಂತಿ ಚಿತ್ರ ಮುಂಜಾನೆ ನಾಲ್ಕು ಗಂಟೆಯಿಂದಲೇ ಪ್ರದರ್ಶನವನ್ನು ಆರಂಭಿಸಲಿದೆ. ಕರ್ನಾಟಕ ಹೊರತುಪಡಿಸಿ ಚೆನ್ನೈ, ಹೈದರಾಬಾದ್, ಮುಂಬೈ ಹಾಗೂ ಕೊಲ್ಕತ್ತಾ ಸೇರಿದಂತೆ ಇತರೆ ರಾಜ್ಯದ ಪ್ರಮುಖ ನಗರಗಳಲ್ಲಿ ಸಹ ಕ್ರಾಂತಿ ಚಿತ್ರದ ಮುಂಗಡ ಬುಕಿಂಗ್ ಸೋಮವಾರ ತೆರೆಯಲಿದೆ.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ