Breaking News

ಆಸ್ತಿ ವಿವಾದ: ಅಣ್ಣನಿಂದ ತಮ್ಮನ ಕೊಲೆ

Spread the love

ಖಾನಾಪುರ: ಹಲವು ವರ್ಷಗಳಿಂದ ಸಹೋದರರ ನಡುವೆ ಇದ್ದ ಆಸ್ತಿ ವಿವಾದ ತಾಲ್ಲೂಕಿನ ಬೇಕವಾಡ ಗ್ರಾಮದ ಬಳಿ ಗುರುವಾರ ಕೊಲೆಯಲ್ಲಿ ಅಂತ್ಯಗೊಂಡಿದೆ.

ಯಲ್ಲಪ್ಪ ಶಾಂತಾರಾಮ ಗುರವ (36) ಮೃತರು. ಇವರ ಅಣ್ಣ ರಾಜು ಶಾಂತಾರಾಮ ಗುರವ (40) ಅವರು ಕೊಲೆ ಆರೋಪಿ.

 

ಇವರಿಬ್ಬರ ನಡುವೆ ಪಿತ್ರಾರ್ಜಿತ ಆಸ್ತಿಗಾಗಿ ಮನಸ್ತಾಪವಿತ್ತು. ಗುರುವಾರ ಇದೇ ವಿಷಯಕ್ಕಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ ಮಿಲಾಯಿಸಿದ್ದರು. ಇಬ್ಬರೂ ಗಾಯಗೊಂಡಿದ್ದರು. ರಾಜು ಅವರು ಬೀಸಿದ ಕಟ್ಟಿಗೆ ಯಲ್ಲಪ್ಪ ಅವರ ತಲೆಗೆ ತಗುಲಿದ್ದರಿಂದ ತೀವ್ರವಾಗಿ ಗಾಯಗೊಂಡು, ಸ್ಥಳದಲ್ಲೇ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ರಾಜು ಅವರಿಗೂ ತೀವ್ರವಾಗಿ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಕೆಜಿಎಫ್​ ನಟ ಹರೀಶ್​ ರಾಯ್ ಅಂತ್ಯಸಂಸ್ಕಾರ

Spread the loveಉಡುಪಿ: ‘ಕೆಜಿಎಫ್​​​ ಚಾಚಾ’ ಖ್ಯಾತಿಯ ಹರೀಶ್​ ರಾಯ್ (Harish Rai) ಅವರ ಅಂತ್ಯಕ್ರಿಯೆ ಇಂದು ಉಡುಪಿಯ ಅಂಬಲಪಾಡಿಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ