Breaking News

ರಶ್ಮಿಕಾಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ಕೊಟ್ಟ ರಿಷಬ್ ಶೆಟ್ಟಿ

Spread the love

ರಿಷಬ್ ಶೆಟ್ಟಿ ನಿರ್ದೇಶನದ ಕಿರಿಕ್ ಪಾರ್ಟಿ ಚಿತ್ರದ ಮೂಲಕ ರಶ್ಮಿಕಾ ಚಿತ್ರರಂಗಕ್ಕೆ ಕಾಲಿಟ್ಟರು. ಆದರೆ ಇತೀಚೆಗೆ ಇಡೀ ದೇಶವೇ ಕೊಂಡಾಡಿದ ಕಾಂತಾರ ಸಿನಿಮಾ ರಿಲೀಸ್‌ ಆದ ವೇಳೆ ಚಿತ್ರ ವೀಕ್ಷಿಸಿಲ್ಲ ಎಂಬ ಹೇಳಿಕೆ ಮೂಲಕ ರಶ್ಮಿಕಾ ಸಿಕ್ಕಾಪಟ್ಟೆ ಟ್ರೋಲ್‌ ಆಗಿದ್ದರು.

ರಶ್ಮಿಕಾಗೆ ‘ಕೃತಜ್ಞತೆ ಇಲ್ಲ’ ಎಂದು ಹಲವರು ಅಸಮಾಧಾನ ಹೊರಹಾಕಿದ್ದರು. ನಟಿ ರಶ್ಮಿಕಾ ಮಂದಣ್ಣ ಕಾಂತಾರ ಚಿತ್ರವನ್ನು ನೋಡಿಲ್ಲ ಎಂಬ ಕಾಮೆಂಟ್‌ಗಳ ಸುತ್ತಲಿನ ವಿವಾದದ ಬಗ್ಗೆ ಇದೀಗ ರಿಷಬ್‌ ಶೆಟ್ಟಿ ಮಾತನಾಡಿದ್ದಾರೆ.

ಇತ್ತೀಚೆಗೆ ವೈರಲ್ ಆದ ಹಳೆಯ ಸಂದರ್ಶನದ ಕ್ಲಿಪ್‌ನಲ್ಲಿ, ರಶ್ಮಿಕಾ ತನ್ನ ಚೊಚ್ಚಲ ಚಿತ್ರದಲ್ಲಿ ನಟಿಸಿದ ಪ್ರೊಡಕ್ಷನ್ ಹೌಸ್ ಬಗ್ಗೆ ಮಾತನಾಡುವುದನ್ನು ಅಭಿಮಾನಿಗಳು ಗಮನಿಸಿದ್ದಾರೆ. ಆದಾಗ್ಯೂ ಅವರು ಯಾವುದೇ ಹೆಸರನ್ನು ಉಲ್ಲೇಖಿಸಲಿಲ್ಲ. ಅಭಿಮಾನಿಗಳು ಆಕೆಯನ್ನು ‘ಕೃತಜ್ಞತೆ ಇಲ್ಲದವರು’ ಎಂದು ಆರೋಪಿಸಿದರು ಮತ್ತು ನಿರ್ದಯವಾಗಿ ಟ್ರೋಲ್ ಮಾಡಿದರು.

 

Mashable Indiaದ ಜೊತೆಗಿನ ಇತ್ತೀಚಿನ ಸಂದರ್ಶನವೊಂದರಲ್ಲಿ, ರಶ್ಮಿಕಾ ಅವರ ಕಾಮೆಂಟ್‌ಗಳಿಗೆ ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ ಮತ್ತು ಅವರು ಅದನ್ನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಹಲವಾರು ಕಲಾವಿದರನ್ನು ಲಾಂಚ್ ಮಾಡಿದ್ದು, ಹಲವು ನಿರ್ದೇಶಕರು, ನಿರ್ಮಾಪಕರು ಅವಕಾಶ ನೀಡಿದ್ದಾರೆ ಎಂದರು. ಅಂತಹ ಜನರ ದೊಡ್ಡ ಪಟ್ಟಿ ಇದೆ ಎಂದು ರಿಷಬ್‌ ಹೇಳಿದ್ದು ಸಖತ್‌ ವೈರಲ್‌ ಆಗಿದೆ.

ಇದಲ್ಲದೆ ಕಿರಿಕ್ ಪಾರ್ಟಿ ಇತ್ತೀಚೆಗೆ ಆರು ವರ್ಷಗಳನ್ನು ಪೂರೈಸಿದಾಗ, ರಿಷಬ್ Instagram ನಲ್ಲಿ ಥ್ರೋಬ್ಯಾಕ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ರಶ್ಮಿಕಾ ಹೊರತುಪಡಿಸಿ ಎಲ್ಲರಿಗೂ ಟ್ಯಾಗ್ ಮಾಡಿದ್ದಾರೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ