Breaking News

ಒಂದಲ್ಲ ಎರಡಲ್ಲ 4 ಮದ್ವೆಯಾಗಿರುವ ಸ್ಯಾಂಟ್ರೋ ರವಿ! ಈತನ ಹಿಂದೆ ಹೋದ ಮಂಡ್ಯ ಯುವತಿ ಇಂದಿಗೂ ನಿಗೂಢ

Spread the love

ಮಂಡ್ಯ: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಬಗೆದಷ್ಟು ಮಾಹಿತಿಗಳು ಬೆಳಕಿಗೆ ಬರುತ್ತಲೇ ಇದೆ. ಕಳ್ಳತನ, ವರ್ಗಾವಣೆ ದಂಧೆ ಹಾಗೂ ವೇಶ್ಯಾವಾಟಿಕೆ ದಂಧೆ ಹೊರತು ಪಡಿಸಿ ಇದೀಗ ಸ್ಯಾಂಟ್ರೋ ರವಿಯ ವೈಯಕ್ತಿಕ ಮಾಹಿತಿಗೆ ಬಯಲಿಗೆ ಬಂದಿದೆ.

 

ಸ್ಯಾಂಟ್ರೋ ರವಿಗೆ ಎರಡಲ್ಲ ನಾಲ್ಕು ಮದುವೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. 2000ನೇ ಇಸವಿಯಲ್ಲಿ ಮಂಡ್ಯದ ರೂಪ ಎನ್ನುವ ಯುವತಿಯನ್ನು ರವಿ ಪ್ರೀತಿಸಿದ್ದ. ರೂಪ ಪಿಯುಸಿ ಓದುತ್ತಿದ್ದಳು. ಬಡವರ ಮನೆಯ ರೂಪ ತುಂಬಾ ಸುಂದರವಾಗಿದ್ದಳು. ಕದ್ದ ಕಾರಿನಿಂದ ರೂಪಳನ್ನು ಬಲೆಗೆ ಬೀಳಿಸಿಕೊಂಡಿದ್ದ ರವಿ, ಮದುವೆಯಾಗ್ತೀನಿ ಎಂದು ನಂಬಿಸಿ ರೂಪಳನ್ನು ಮೈಸೂರಿಗೆ ಕರೆದುಕೊಂಡು ಹೋಗಿದ್ದ.

ಅಂದು ರವಿ ಜತೆ ಮೈಸೂರಿಗೆ ಹೋದ ರೂಪ ಇಂದಿಗೂ ನಿಗೂಢವಾಗಿಯೇ ಉಳಿದಿದ್ದಾಳೆ. ಇಲ್ಲಿಯವರೆಗೆ ರೂಪ ಏನಾದಳು ಎಂಬ ಮಾಹಿತಿ ಯಾರಿಗೂ ಗೊತ್ತಿಲ್ಲ. ರೂಪಳನ್ನು ಸ್ಯಾಂಟ್ರೋ ರವಿ ಏನು ಮಾಡಿರಬಹುದು ಎಂಬ ಹಲವು ಅನುಮಾನ ಕಾಡತೊಡಗಿದೆ. ರೂಪ ಸ್ಯಾಂಟ್ರೋ ರವಿ ಜೊತೆ ಹೋದ ಮೇಲೆ ಆಕೆಯ ಕುಟುಂಬ ಮಂಡ್ಯ ಖಾಲಿ ಮಾಡಿದೆ.

ಇದಾದ ಬಳಿಕ 2007ರಲ್ಲಿ ಮೈಸೂರಿನ ಆಫೀಸರ್ ಮಗಳ ಮೇಲೆ ಸ್ಯಾಂಟ್ರೋ ರವಿಗೆ ಲವ್ ಆಗಿತ್ತು. ಆದರೆ, ಆಕೆ ಅಪ್ರಾಪ್ತೆಯಾಗಿದ್ದಳು. ಆಕೆಗೂ ತನ್ನ ಪ್ರೀತಿಯ ಬಲೆ ಬೀಸಿದ್ದ ಸ್ಯಾಂಟ್ರೋ ರವಿ, ಆಕೆಯನ್ನು ಕರೆದುಕೊಂಡು ಹೋಗಿ ಮದುವೆಯಾಗಲು ಸಂಚು ರೂಪಿಸಿದ್ದ. ಅಪ್ರಾಪ್ತ ಬಾಲಕಿಯ ಅಪಹರಣ ವಿಚಾರವಾಗಿ ಪೊಲೀಸರಿಗೆ ಅಂದು ಸಿಕ್ಕಿಬಿದ್ದು ಜೈಲು ಸೇರಿದ್ದ ಎಂದು ತಿಳಿದುಬಂದಿದೆ.

ಮೈಸೂರಿನ ಯುವತಿಯೊಬ್ಬಳು ರವಿ ವಿರುದ್ಧ ಪ್ರಕರಣ ದಾಖಲಿಸುತ್ತಿದ್ದಂತೆ ಆತ ಪರಾರಿಯಾಗಿದ್ದಾನೆ. ಮೈಸೂರು ಪೊಲೀಸರು ವಿಶೇಷ ತಂಡ ರಚಿಸಿ ಸ್ಯಾಂಟ್ರೋ ರವಿಗಾಗಿ ಬಲೆ ಬೀಸಿದ್ದಾರೆ. ಬಾಂಬೆಗೆ ಹೋಗಿದ್ದ ರಾಜಕಾರಣಿಗಳ ಜೊತೆ 12 ಹುಡುಗಿಯರನ್ನು ಈತ ಕಳುಹಿಸಿದ್ದ ಎಂದು ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿರುವುದು ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸ್ಯಾಂಟ್ರೋ ರವಿ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. 


Spread the love

About Laxminews 24x7

Check Also

SIT ಮುಂದೆ ಕೊನೆಗೂ ಬುರುಡೆ ರಹಸ್ಯ ಬಿಚ್ಚಿಟ್ಟ ಗಿರೀಶ್ ಮಟ್ಟಣ್ಣವರ್

Spread the loveಮಂಗಳೂರು, ಸೆಪ್ಟೆಂಬರ್​ 07: ಧರ್ಮಸ್ಥಳ ಬುರುಡೆ ಪ್ರಕರಣದ (Dharmasthala Case) ಒಂದೊಂದೆ ಸತ್ಯಗಳು ಹೊರ ಬರುತ್ತಿವೆ.  ಇಷ್ಟು ದಿನ ಬುರುಡೆ ಕಥೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ