Breaking News

‘ನೆಮ್ಮದಿ ಜೀವನಕ್ಕಾಗಿ ಕಾನೂನು ಅವಶ್ಯ’

Spread the love

ಗೋಕಾಕ: ‘ನೆಮ್ಮದಿ ಜೀವನಕ್ಕಾಗಿ ರೂಪಿಸಿದ ಕಾನೂನುಗಳ ಅರಿವು ಪ್ರತಿಯೊಬ್ಬರಿಗೂ ಅವಶ್ಯಕ’ ಎಂದು ಇಲ್ಲಿನ ತಾಲ್ಲೂಕು ಕಾನೂನು ಸೇವೆಗಳ ಸಮಿತಿ ಕಾರ್ಯದರ್ಶಿ, ಪ್ರಧಾನ ಸಿವಿಲ್ ನ್ಯಾಯಾಧೀಶ ರಾಜೀವ ಗೋಳಸಾರ ಹೇಳಿದರು.

ಇಲ್ಲಿನ ಸರ್ಕಾರ ಪ್ರೌಢಶಾಲೆಯಲ್ಲಿ ಈಚೆಗೆ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ಸಾಮಾಜಿಕ ನ್ಯಾಯ ತಾಲ್ಲೂಕು ಘಟಕ ಮತ್ತು ಶಿಕ್ಷಣ ಇಲಾಖೆ, ಪಂಚಾಯತ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಮಾನವ ಹುಕ್ಕುಗಳ ದಿನಾಚರಣೆ ಮತ್ತು ಅಂತರರಾಷ್ಟ್ರೀಯ ವಿಕಲಚೇತನ ದಿನಾಚರಣೆಯ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 

‘ಪ್ರತಿಯೊಬ್ಬ ನಾಗರಿಕ ಕಾನೂನುಗಳ ಅರಿವು ಪಡೆದರೆ ತಮ್ಮ ಹಕ್ಕು ಚಲಾಯಿಸಲು ಅನುಕೂಲ. ಕಾನೂನುಗಳ ಪಾಲನೆಯಿಂದ ನೆಮ್ಮದಿಯ ಬದುಕು ಸಾಧ್ಯ’ ಎಂದು ಹೇಳಿದರು.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತಾಲ್ಲೂಕು ಘಟಕದ ಅಧ್ಯಕ್ಷೆ ವೈಶಾಲಿ ಭರಭರಿ, ಮಹಿಳಾ ವಿಭಾಗದ ಜಿಲ್ಲಾ ಘಟಕದ ಧ್ಯಕ್ಷೆ ಎಸ್.ಎಸ್.ಬನ್ನೂರ ಮಾತನಾಡಿದರು. ರಾಷ್ಟ್ರೀಯ ಮಾನವ ಆಯೋಗ ಮತ್ತು ಸಾಮಾಜಿಕ ನ್ಯಾಯ ಜಿಲ್ಲಾ ಉಪಾಧ್ಯಕ್ಷರಾದ ಮಹಾಂತೇಶ ತಾವಂಶಿ, ಶಾಮಾನಂದ ಪೂಜೇರಿ, ತಾಲ್ಲೂಕು ಅಧ್ಯಕ್ಷೆ ಎಂ.ಡಿ.ಜಕಾತಿ, ರಾಮಚಂದ್ರ ಕಾಕಡೆ, ಸಿಡಿಪಿಒ ಮೇಲ್ವಿಚಾರಕಿ ನಸರೀನ ಕೊಣ್ಣೂರ ಇದ್ದರು.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ