ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಮೇ ತಿಂಗಳಿನವರೆಗೆ ಸರ್ಕಾರವನ್ನು ದುಡಿಕೊಂಡು ಹೋಗುವುದು ಸರಿಯಲ್ಲ. ಜನವರಿಯಲ್ಲಿ ರಾಜ್ಯದ ಚುನಾವಣೆ ನಡೆಯಬೇಕು. ಇದು ಉತ್ತಮ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಮ್.ಇಬ್ರಾಹಿಂ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜೆಡಿಎಸ್ ನಾಯಕರ ಚಿಂತನ – ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಕ್ಷ ಸಂಘಟನೆ ಹಾಗೂ ಪಂಚರತ್ನ ಕಾರ್ಯಕ್ರಮದ ರೂಪರೇಷೆ ಸಿದ್ದತೆ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಜನೇವರಿ ತಿಂಗಳಲ್ಲಿ ಪಂಚ ರತ್ನ ಕಾರ್ಯಕ್ರಮ ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆಯಲಿದೆ. ಇದಲ್ಲದೇ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿಯಾಗಿದ್ದಾರೆ ಎಂದರು.
ನಾವು ಎಮ್ಎಲ್ಎ ಟಿಕೆಟ್ ಗೆ ಫೀಸ್ ಫಿಕ್ಸ್ ಮಾಡಿಲ್ಲ. ಧಾರವಾಡ ಜಿಲ್ಲೆಯಲ್ಲೂ ಸೋಲಿನ ಭಯದಿಂದ ಮತದಾರರ ಹೆಸರು ಡಿಲೀಟ್ ಮಾಡಲಾಗಿದೆ. ಬಿಜೆಪಿ ಕಾಂಗ್ರೆಸ್ ಮತದಾರರ ಆಮೀಷ ರೆಕಾರ್ಡ್ ಮಾಡಿ ನಾವು ಚುನಾವಣೆಗೆ ಮುನ್ನ ದೂರು ಕೊಡ್ತೀವಿ. ಬಿಜೆಪಿಯವರು ಶಾಸಕ ಸ್ಥಾನಕ್ಕೆ ನಿಲ್ಲಲು ಅರ್ಹರಲ್ಲ. ಹೀಗಾಗಿ ನಾವು ನ್ಯಾಯಾಲಕ್ಕೆ ದೂರು ಕೊಡ್ತೀವಿ. ಚುನಾವಣೆ ಮುನ್ನ ನಾವು ಕೋರ್ಟ್ ಗೆ ಹೋಗ್ತೀವಿ. ಕ್ರಿಮಿನಲ್ ಹಿನ್ನಲೆಯುಳ್ಳವರಿಗೆ ಟಿಕೆಟ್ ಕೊಟ್ರೆ ನಾವು ಚುನಾವಣೆಗೆ ಮುನ್ನ ಕೋರ್ಟ್ ಗೆ ಹೋಗ್ತೀವಿ ಎಂದರು.
ಈಗಾಗಲೇ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿದೆ. ಜನವರಿಯಲ್ಲಿ ನಮ್ಮ ರಾಜ್ಯದ ಚುನಾವಣೆ ನಡಿಬೇಕು. ಮುಂದೆ ಸರ್ಕಾರ ಮಾಡೋರೆ ನಾವು. ಕಾಂಗ್ರೆಸ್ ಬಿಜೆಪಿ ರೌಡಿಗಳನ್ನು ಪಾರ್ಟಿಗೆ ಸೇರಿಸಿಕೊಳತ್ತಾ ಇದ್ದಾರೆ. ನಮ್ಮ ಪಾರ್ಟಿಯಲ್ಲಿ ಕ್ರಿಮಿನಲ್ ಕೇಸ್ ಇರೋರು, ರೌಡಿ ಲಿಸ್ಟ್ ನಲ್ಲಿ ಹೆಸರಿದ್ರೆ ನಾವು ಕ್ರಮ ಕೈಗೊಳ್ತೀವಿ ಎಂದು ಹೇಳಿದರು.