ಬೆಂಗಳೂರು: ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಹೆಚ್ಚುವರಿಯಾಗಿ 258 ಹುದ್ದೆ ಸೃಜಿಸಲು ಸರಕಾರ ಮುಂದಾಗಿದೆ.
ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ಮಂಜೂ ರಾಗಿದ್ದ 524ರ ಪೈಕಿ 266 ಸಿಬಂದಿಯನ್ನು ಲೋಕಾಯುಕ್ತ ಸಂಸ್ಥೆಗೆ ವರ್ಗಾಯಿಸಲು ಪ್ರಸ್ತಾವಿಸಲಾಗಿದೆ.
ವರ್ಗಾವಣೆ ಬಳಿಕ ಬಾಕಿ ಉಳಿಯುವ 258 ಸಿಬಂದಿ ಪೈಕಿ ಗ್ರೂಪ್-ಎ ವೃಂದದ ಅಧಿಕಾರಿಗಳನ್ನು ಸರಕಾರದ ವಶಕ್ಕೆ ಹಾಗೂ ಗ್ರೂಪ್-ಬಿ, ಗ್ರೂಪ್-ಸಿ ವೃಂದದ ಅಧಿಕಾರಿ- ಸಿಬಂದಿಯನ್ನು ಪೊಲೀಸ್ ಇಲಾಖೆಯ ವಶಕ್ಕೆ ಮುಂದಿನ ಮರು ಸ್ಥಳ ನಿಯುಕ್ತಿ ಆದೇಶ ನೀಡುವ ಸಲುವಾಗಿ ಹಿಂದಿರುಗಿಸಲು ಸರಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
‘ಮೂರು ತಿಂಗಳಲ್ಲೇ 60 ಎಫ್‌ಐಆರ್’ ಶೀರ್ಷಿಕೆ ಯಡಿ ‘ಉದಯವಾಣಿ’ಯಲ್ಲಿ ನ.17ರಂದು ವಿಶೇಷ ವರದಿ ಪ್ರಕಟವಾಗಿತ್ತು. ಇದರಲ್ಲಿ ಲೋಕಾಯುಕ್ತ ಸಂಸ್ಥೆಗೆ ಹೆಚ್ಚುವರಿ ಹುದ್ದೆಯ ಅಗತ್ಯದ ಕುರಿತು ವಿವರಿಸಲಾಗಿತ್ತು.