Breaking News

ಅಶ್ವಥ್​ ನಾರಾಯಣರನ್ನು ಭಾವಿ ಸಿಎಂ ಎಂದು ಬಿಂಬಿಸಿದ ಅರುಣ ಶಹಾಪುರ

Spread the love

ಧಾರವಾಡ: ಚುನಾವಣೆ ಇನ್ನೇನು ಹತ್ತಿರದಲ್ಲಿ ಇರುವಾಗ ಕರ್ನಾಟಕದ ರಾಜಕೀಯ ಪಕ್ಷಗಳಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಯಾರು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಅನೇಕರು ಮುಖ್ಯಮಂತ್ರಿ ಆಕಾಂಕ್ಷಿಗಳೇ ಆಗಿರುತ್ತಾರೆ.

ಧಾರವಾಡದಲ್ಲಿ ನಡೆದ ಸಮಾವೇಶ ಒಂದರಲ್ಲಿ ಭಾಷಣ ಮಾಡುವಾಗ ವಿಧಾನ ಪರಿಷದ್​ ಸದಸ್ಯ ಅರುಣ ಶಹಾಪುರ ‘ಕರ್ನಾಟಕದ ಭವಿಷ್ಯ ಅಶ್ವಥ್ ನಾರಾಯಣ ಕೈಯಲ್ಲಿದೆ.

ಇವರ ನೇತೃತ್ವದಲ್ಲಿ ಕರ್ನಾಟಕ ಸುಭಿಕ್ಷ ಆಗುತ್ತದೆ. ಹನ್ನೊಂದು ಹೆಜ್ಜೆ ಆಗಿದೆ ಇನ್ನೊಂದೆ ಹೆಜ್ಜೆ ಇದೆ’ ಎಂದು ಧಾರವಾಡದಲ್ಲಿ ವಿಧಾನ ಪರಿಷತ್​ ಸದಸ್ಯ ಅರುಣ ಶಹಾಪುರ ಹೇಳಿದ್ದಾರೆ.

ಅತಿಥಿ ಉಪನ್ಯಾಸಕರ ಶೈಕ್ಷಣಿಕ ಸಮಾವೇಶದಲ್ಲಿ ಭಾಷಣ ಮಾಡಿದ ಶಹಾಪುರ, ಸಮಾವೇಶ ಉದ್ಘಾಟಿಸಿದ ಸಚಿವ ಅಶ್ವಥ್​ ನಾರಾಯಣರನ್ನು ಹೊಗಳುತ್ತಾ ಭಾವಿ ಸಿಎಂ ಎಂದು ಬಿಂಬಿಸಿದರು. ಭಾಷಣದಲ್ಲಿ ‘ಈ ಹಿಂದೆ ಬೇಡಿಕೆ ಈಡೇರಿಸದ್ದಕ್ಕೆ ಉಪನ್ಯಾಸಕರು ಆಕ್ರೋಶ ತೋರಿಸಿದ್ದರು. ಆದರೆ ಅದೇ ಉಪನ್ಯಾಸಕರು ಈಗ ಸಚಿವರನ್ನು ರಾಜ್ಯದ ಭವಿಷ್ಯ ಎನ್ನುತ್ತಿದ್ದಾರೆ. ಅಶ್ವಥ್​ ನಾರಾಯಣ ಬೈದವರಿಂದ ಜೈಕಾರ ಹಾಕಿಸಿಕೊಳ್ಳುವಂತೆ ಕೆಲಸ ಮಾಡುತ್ತಾರೆ. ಈಗ ಬೆಳೆದು ಉಪಮುಖ್ಯಮಂತ್ರಿ ಆಗಿದ್ದಾರೆ’ ಎಂದರು.

ಜೊತೆಗೆ ‘ಹಿಂದೊಂದು ಸರ್ಕಾರ ಒಂದು ಪ್ರದೇಶಕ್ಕೆ ಸಿಮೀತ ಆಗಿತ್ತು. ಆದರೆ ಈಗ ರಾಮನಗರ ಅಂದ್ರೆ ಅಶ್ವಥ್ ನಾರಾಯಣ ಅಂತಾರೆ. ಇವರ ರಾಜ್ಯದ ಕೈಗೆ ನೇತೃತ್ವ ಸಿಗಬೇಕು. ಆಗ ಕರ್ನಾಟಕ ರಾಜ್ಯಕ್ಕೆ ಸುಭಿಕ್ಷೆ ಬರುತ್ತದೆ’ ಎಂದು ಪರೋಕ್ಷವಾಗಿ ಜೆಡಿಎಸ್​ ಕಾಲೆಳೆದಿದ್ದಾರೆ.


Spread the love

About Laxminews 24x7

Check Also

ಮತ್ತೆ ಪಾಚಿಕಟ್ಟಿದ ಸುವರ್ಣ ಸೌಧ:

Spread the loveಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಬೆಳಗಾವಿಯ ಸುವರ್ಣ ವಿಧಾನಸೌಧ ಮತ್ತೆ ಪಾಚಿಕಟ್ಟಿದೆ. ಸ್ವಚ್ಛತೆಗೆ ಅನುದಾನ ಕೊರತೆ ಎದುರಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ