ಕಾಗವಾಡ ತಾಲೂಕಿನ ಕೃಷ್ಣನದಿ ತೀರದ ಜೂಗುಳ ಗ್ರಾಮ ಪಂಚಾಯಿತಿ ವ್ಯಾಪತ್ತಿಯ ಶಹಾಪೂರ ಗ್ರಾಮ ಸಂಪೂರ್ಣವಾಗಿ 2019 ಹಾಗು 2021 ರಲ್ಲಿಯ ಮಹಾಪೂರ ನೀರಿನಲ್ಲಿ ಮುಳುಗಡೆಯಾಗಿ ಗ್ರಾಮದಲ್ಲಿ ದೋಣಿಯಿಂದ ಸಂಚರಿಸಿದರು. ಮನೆಗಳು ನೀರಿನಲ್ಲಿ ಮುಳುಗಡೆವಾಗಿದವು ಎಂದು ಪರಿಗಣಿಸಿ ಪ್ರತಿಯೊಂದು ಕುಟುಂಬಕ್ಕೆ 10 ಸಾವಿರ ರೂ. ಪರಿಹಾರ ಧನ ನೀಡಿದರು. ಆದರೆ ಈಗ ರಾಜ್ಯ ಸರ್ಕಾರ ಗ್ರಾಮಗಳಲ್ಲಿ ಮನೆಗಳು ಮುಳುಗಡೆವಾಗೆಯಿಲ ಎಂದು ಹೇಳಿ 92 ಕುಟುಂಬದವರಿಗೆ ಸಿ ವರ್ಗದಲ್ಲಿ ವರ್ಗಾಯಿಸಿ ಸರ್ಕಾರದಿಂದ ಮನೆಗಳು ನಿರ್ಮಿಸಲು ತಲಾ 5 ಲಕ್ಷ ರೂ. ನೀಡುವ ಯೋಜನೆಯಿಂದ ಕೈ ಬಿಟ್ಟಿದ್ದಾರೆ.
ಇದರ ಹಿನ್ನೆಲೆಯಲ್ಲಿ ಶಹಾಪುರ್ ಗ್ರಾಮದ ಎಲ್ಲ ದಲಿತ ಕುಟುಂಬಗಳು ಜೂಗುಳ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ಕೈಗೊಂಡು ರಾಜ್ಯ ಸರ್ಕಾರಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಧಿಕ್ಕಾರ ಕೂಗಿರುವ ಘಟ್ಟಣೆ ನಡೆದಿದೆ. ಬುದುವಾರ ರಂದು ಜೂಗುಳ ಗ್ರಾಮ ಪಂಚಾಯಿತಿ ಎದುರು ಶಹಾಪುರ್ ಗ್ರಾಮದ ಎಲ್ಲ ದಲಿತ ಮಹಿಳೆಯರು, ಪುರುಷರು ತಮ್ಮ ಮಕ್ಕಳನ್ನು ಕರೆದುಕೊಂಡು ಪಂಚಾಯಿತಿ ಎದುರು ಬಂದು ತಮ್ಮ ಆಕ್ರೋಶ ಹೊರಹಾಕಿದರು.
ಸನ್ 2019 ಮತ್ತು 2021 ರಲ್ಲಿ ಕೃμÁ್ಣ ನದಿಗೆ ಮಹಾಪೂರ ಬಂದು, ನದಿ ತೀರದಲ್ಲಿರುವ ಈ ಗ್ರಾಮ ಸಂಪೂರ್ಣವಾಗಿ ಮುಳುಗಡೆವಾಗಿತು. ಗ್ರಾಮದಲ್ಲಿ ದೋಣಿಯಿಂದ ಸಂಚಾರಿಸಿದ್ದರು. ಮನೆಗಳ ಮೇಲೆ 5 ರಿಂದ 10 ಅಡ್ಡಿ ನೀರು ಸಂಗ್ರಹಿಸಿತ್ತು ಇಂತಹ ಸನ್ನಿಜ್ಞ ಸ್ಥಿತಿಯಲ್ಲಿರುವ ಈ ಗ್ರಾಮದ ಜನರಿಗೆ ಸರ್ವೇ ಮುಖಾಂತರ 98 ಮನೆಗಳು ಮಂಜುರಗೊಳಿಸಬೇಕೆಂದು ಆದೇಶಿಸಿದರು. ಆದರೆ ಕೇವಲ ಮೂರು ಮನೆಗಳಿಗೆ ‘ಎ’ ವರ್ಗದಲ್ಲಿ ವರ್ಗಾಯಿಸಿದ್ದು 92 ಮನಿಗಳು ‘ಸಿ’ ವರ್ಗದಲ್ಲಿ ವರ್ಗಾಯಿಸಿದ್ದಾರೆ ಇದರಿಂದ ಇಲ್ಲಿ ಕುಟುಂಬದವರು ರೊಚ್ಚಿಗೆದ್ದು ಪ್ರತಿಭಟನೆ ಕೈಗೊಂಡಿದರು.