ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ನೂತನವಾಗಿ ಆರಂಭಿಸಲಿರುವ ಮಲ್ಟಿ ಆಯಕ್ಸೆಲ್ ಸ್ಲೀಪರ್ ಮತ್ತು ವಿದ್ಯುತ್ ಚಾಲಿತ ಬಸ್‌ಗಳನ್ನು ಪರಿಚಯಿಸುತ್ತಿದ್ದು, ಈ ವಾಹನಗಳಿಗೆ ಪ್ರಯಾಣಿಕರಿಂದ ಬ್ರ್ಯಾಂಡ್ ಹೆಸರು ಆಹ್ವಾನಿಸಿದೆ.
ಹೊಸದಾಗಿ ಪರಿಚಯಿಸಲಾಗುತ್ತಿರುವ ಈ ಬಸ್‌ಗಳಿಗೆ ಪ್ರಯಾಣಿಕರು ಬ್ರ್ಯಾಂಡ್ ಹೆಸರು, ಟ್ಯಾಗ್‌ಲೈನ್ ಹಾಗೂ ಗ್ರಾಫಿಕ್ಸ್‌ಗಳನ್ನು ಕೆಎಸ್‌ಆರ್‌ಟಿಸಿಗೆ ಕಳುಹಿಸಬೇಕು. ಪ್ರತೀ ಮಾದರಿಯ ವಾಹನಗಳಿಗೆ ಉತ್ತಮ ಬ್ರ್ಯಾಂಡ್ ಹೆಸರನ್ನು ಸೂಚಿಸುವ ವಿಜೇತರಿಗೆ ಆಕರ್ಷಕ ಬಹುಮಾನ ನೀಡಿ ಗೌರವಿಸಲಾಗುವುದು.
ಉತ್ತಮ ಬ್ರ್ಯಾಂಡ್ ಹೆಸರು ಸೂಚಿಸಿದವರಿಗೆ 10 ಸಾವಿರ ರೂ. ನಗದು ಹಾಗೂ ಉತ್ತಮ ಗ್ರಾಫಿಕ್ ನೀಡಿದವರಿಗೆ ತಲಾ 25 ಸಾವಿರ ರೂ. ನಗದು ನೀಡಲಾಗುವುದು. ಬ್ರ್ಯಾಂಡ್ ಹೆಸರು ಸೂಚಿಸಲು ಡಿಸೆಂಬರ್ 5 ಕೊನೆಯ ದಿನ. ಸಾರ್ವಜನಿಕರು ತಮ್ಮ ಬ್ರ್ಯಾಂಡ್ ಐಡಿಯಾಗಳನ್ನು cpro@ksrtc.org ಇಲ್ಲಿಗೆ ಮೇಲ್ ಮಾಡಬಹುದು ಅಥವಾ ನಿಗಮದ ಫೇಸ್‌ಬುಕ್/ಟ್ವಿಟರ್ ಖಾತೆಗೆ ಸಲ್ಲಿಸಬಹುದು ಎಂದು ಕೆಎಸ್‌ಆರ್‌ಟಿಸಿ ಪ್ರಕಟನೆ ತಿಳಿಸಿದೆ.