Breaking News

ಅಶ್ಲೀಲ ದೃಶ್ಯ ತೋರಿಸಿ ಮರ್ಯಾದೆ ತೆಗೆಯುತ್ತೆನೆ ಎಂದು ಬ್ಲ್ಯಾಕ್​​ಮೇಲ್ ,​ನಿವೃತ್ತ ಅಧಿಕಾರಿಗಳೇ ಟಾರ್ಗೆಟ್​!

Spread the love

ಬೆಂಗಳೂರು: ಸ್ಮಾರ್ಟ್​ಫೋನ್​ ಬಳಕೆದಾರರೇ ಎಚ್ಚರ. ಸೈಬರ್​ ಕಳ್ಳರು ಹೊಸ ಮೋಸದ ಅಸ್ತ್ರ ವಾಟ್ಸ್​ಆಯಪ್​ ವಿಡಿಯೋ ಕಾಲ್​ ಬಲೆ ಬೀಸುತ್ತಿದ್ದಾರೆ. ಚಪಲಕ್ಕೆ ಅಶ್ಲೀಲ ವಿಡಿಯೋ ನೋಡಿದರೆ ಸಾಕು ಅದನ್ನೇ ಅಸ್ತ್ರವಾಗಿಟ್ಟುಕೊಂಡು ಬ್ಲ್ಯಾಕ್​​​ಮೇಲ್​ ಮಾಡಿ ಹಣ ಪೀಕುತ್ತಿದ್ದಾರೆ ಹುಷಾರ್​.

 

ಅದರಲ್ಲಿಯೂ ಇತ್ತೀಚೆಗೆ ನಿವೃತ್ತ ನೌಕರರು ಮತ್ತು ವೃದ್ಧರನ್ನೇ ಟಾರ್ಗೆಟ್​ ಮಾಡುತ್ತಿದ್ದಾರೆ. ೇಸ್​ಬುಕ್​, ಟ್ವಿಟರ್​, ಇನ್​ಸ್ಟ್ರಾಗ್ರಾಂನಲ್ಲಿ ಫ್ರೆಂಡ್​​ ರಿಕ್ವೆಸ್ಟ್​ ಕಳುಹಿಸಿ ಅಥವಾ ನೇರವಾಗಿ ವಾಟ್ಸ್​ಆಯಪ್​ನಲ್ಲಿ ವಿಡಿಯೋ ಕಾಲ್​ ಮಾಡಿ ಯುವತಿಯರು ಸ್ನೇಹ ಬಯಸುತ್ತಾರೆ.

ವಿಡಿಯೋ ಕಾಲ್​ ಮಾಡಿ ಸಂಭಾಷಣೆಗೆ ಎಳೆದು ತಡರಾತ್ರಿ ಏಕಾಏಕಿ ಬೆತ್ತಲೆ ದೃಶ್ಯ ತೋರಿಸುತ್ತಾರೆ. ಚಪಲಕ್ಕೆ ಸ್ವಲ್ಪ ಕಣ್ಣಾಡಿಸಿದರೂ ಸಾಕು ಸೈಬರ್​ ಖದೀಮರು, ವಿಡಿಯೋ ಕಾಲ್​ನ ಸ್ಕ್ರೀನ್​ ಶಾರ್ಟ್​ ಅಥವಾ ವಿಡಿಯೋ ರೆಕಾರ್ಡ್​ ಮಾಡಿಕೊಳ್ಳುತ್ತಾರೆ. ಒಂದೆಡೆ ಕರೆ ಸ್ವೀಕರಿಸಿದವರ ಫೋಟೋ ಜತೆಗೆ ಕರೆ ಮಾಡಿದವರ ಬೆತ್ತಲೆ ಪೋಟೋ ಸಹ ಸೆರೆಯಾಗಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಮೋಸಗಾರರು ಕರೆ ಸ್ವೀಕರಿಸಿದವರ ವ್ಯಕ್ತಿಯ ವಾಟ್ಸ್​ಆಯಪ್​ಗೆ ಅಶ್ಲೀಲ ಫೋಟೋವನ್ನು ಕಳುಹಿಸಿ ಬ್ಲ್ಯಾಕ್​​ಮೇಲ್​ಗೆ ಇಳಿಯುತ್ತಾರೆ. ಫೋನ್​​ ಪೇ, ಗೂಗಲ್​ ಪೇ ಅಥವಾ ನೆಟ್​ ಬ್ಯಾಂಕಿಂಗ್​ನಲ್ಲಿ ಹಣ ಸುಲಿಗೆ ಮಾಡುತ್ತಾರೆ. ಇಲ್ಲವಾದರೆ, ನಿಮ್ಮ ಸ್ನೇಹಿತರು, ಕುಟುಂಬ ಸದಸ್ಯರ ಫೇಸ್​​ಬುಕ್​ ಖಾತೆಗೆ ಟ್ಯಾಗ್​ ಮಾಡುತ್ತೇವೆ ಅಥವಾ ವಾಟ್ಸ್​ಆಯಪ್​ಗೆ ಫೋಟೋ ಕಳುಹಿಸಿ ನನ್ನ ಬೆತ್ತಲೆ ದೃಶ್ಯ ತೋರಿಸಿ ಮರ್ಯಾದೆ ತೆಗೆಯುತ್ತೆನೆ ಎಂದು ಬ್ಲ್ಯಾಕ್​​ಮೇಲ್​ ಮಾಡಿ ಸುಲಿಗೆ ಮಾಡುತ್ತಿದ್ದಾರೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ