ಗೋಕಾಕ್ ತಾಲೂಕಿನಲ್ಲಿ ಅಂಕಲಗಿ ಮತ್ತು ಅಕ್ಕತಂಗೇರಹಾಳ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ರಮೇಶ ಜಾರಕಿಹೊಳಿ ಭೂಮಿ ಪೂಜೆ ನೆರವೇರಿಸಿದರು.
ನಗರೋತ್ತಾನ ಯೋಜನೆಯಡಿ 5 ಕೋಟಿ ರೂಪಾಯಿ ಮತ್ತು 15ನೇ ಹಣಕಾಸಿನ ಯೋಜನೆಯಡಿ 2.5 ಕೋಟಿ ರೂಪಾಯಿ ವೆಚ್ಛದಲ್ಲಿ ರಸ್ತೆ ನಿರ್ಮಾಣ ಸೇರಿ ಇನ್ನಿತರ ಕಾಮಗಾರಿಗಳಿಗೆ ಶಾಸಕ ರಮೇಶ ಜಾರಕಿಹೊಳಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು 20ಕ್ಕೂ ಹೆಚ್ಚು ವರ್ಷಗಳ ಕಾಲ ತಮ್ಮ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಟ್ಟಿದ್ದಿರಿ. ನಿಮಗೆ ನಾನು ಎಂದೆಂದಿಗೂ ಚಿರಋಣಿ ಆಗಿರುತ್ತೇನೆ.ಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಕೈಗೊಂಡು ಇಡೀ ರಾಜ್ಯದಲ್ಲಿಯೇ ಗೋಕಾಕ್ ಮಾದರಿ ಕ್ಷೇತ್ರವನ್ನಾಗಿ ಮಾಡುವೆ ಎಂದು ಸಾರ್ವಜನಿಕರಿಗೆ ರಮೇಶ ಜಾರಕಿಹೊಳಿ ಭರವಸೆ ನೀಡಿದರು.
ಈ ವೇಳೆ ಆಪ್ತಸಹಾಯಕ ಭೀಮನಗೌಡ ಪೊಲೀಸ್‍ಗೌಡರ, ಮುಖ್ಯ ಅಭಿಯಂತರ ಮನಗೂಳಿ, ಮಂಜುನಾಥ ಗಡಾದ, ಮುನ್ನಾ ದೇಸಾಯಿ, ಬಿಜೆಪಿ ಮುಖಂಡೆ ಅನ್ನಪೂರ್ಣಾ ನಿರ್ವಾಣಿ ಸೇರಿ ಇನ್ನಿತರರು ಉಪಸ್ಥಿತರಿದ್ದರು.