Breaking News

ವಿಶ್ವದ ಅಗ್ರ ಉಲ್ಲೇಖಿತ ಸಂಶೋಧಕರಲ್ಲಿ ಕೆಎಲ್‌ಇಯ ಇಬ್ಬರಿಗೆ ಸ್ಥಾನ

Spread the love

ಹುಬ್ಬಳ್ಳಿ: ಕ್ಲಾರಿವೇಟ್‌ (ವೆಬ್‌ ಆಫ್ ಸೈನ್ಸ್‌ ಕೋರ್ ಕಲೆಕ್ಷನ್) ಗುರುತಿಸಿರುವ 2022ನೇ ಸಾಲಿನ ವಿಶ್ವದ ಅತಿ ಹೆಚ್ಚು ಉಲ್ಲೇಖಿತ ಅಗ್ರ ಸಂಶೋಧಕರ (ಹೈಲಿ ಸೈಟೆಡ್‌ ರಿಸರ್ಚರ್‌) ವಾರ್ಷಿಕ ಪಟ್ಟಿಯಲ್ಲಿ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಅಡ್ವಾನ್ಸ್ಡ್‌ ಸೈನ್ಸಸ್‌ನ ಸಂಶೋಧನಾ ನಿರ್ದೇಶಕ ಪ್ರೊ.

ತೇಜರಾಜ್ ಎಂ. ಅಮ್ಮಿನಬಾವಿ ಮತ್ತು ಸಹಾಯಕ ಪ್ರಾಧ್ಯಾಪಕ ಡಾ. ನಾಗರಾಜ್ ಪಿ. ಶೆಟ್ಟಿ ಅವರು ಸ್ಥಾನ ಪಡೆದಿದ್ದಾರೆ.

ಕಳೆದ ಒಂದು ದಶಕದಲ್ಲಿ ಬಹು ಉಲ್ಲೇಖಿತ ಪತ್ರಿಕೆಗಳ ಪ್ರಕಟಣೆಯ ಮೂಲಕ, ಗಮನಾರ್ಹ ಪ್ರಭಾವ ಬೀರಿದ ವಿಜ್ಞಾನಿಗಳು ಮತ್ತು ಸಾಮಾಜಿಕ ವಿಜ್ಞಾನಿಗಳನ್ನು ಕ್ಲಾರಿವೇಟ್ ಗುರುತಿಸುತ್ತದೆ. ಪಟ್ಟಿಯು 21 ಕ್ಷೇತ್ರಗಳ ಸುಮಾರು 4 ಸಾವಿರಕ್ಕೂ ಹೆಚ್ಚು ಉಲ್ಲೇಖಿತ ಸಂಶೋಧಕರನ್ನು ಒಳಗೊಂಡಿದೆ. ಈ ಪೈಕಿ, ಸುಮಾರು 3,200ಕ್ಕೂ ಹೆಚ್ಚು ಸಂಶೋಧಕರು ಹಲವು ಕ್ಷೇತ್ರಗಳಲ್ಲಿ ಅಸಾಧಾರಣ ಕಾರ್ಯಕ್ಷಮತೆ ಹೊಂದಿದ್ದಾರೆ.

ತೇಜರಾಜ್ ಅವರು ಸತತ ಎರಡನೇ ವರ್ಷ ಈ ಮನ್ನಣೆ ಪಡೆದಿದ್ದು, ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ನಾಗರಾಜ್ ಅವರು 18ನೇ ಸ್ಥಾನ ಪಡೆದಿದ್ದಾರೆ. ಪಟ್ಟಿಯಲ್ಲಿ ಭಾರತದ 25 ಸಂಶೋಧಕರು ಸ್ಥಾನ ಪಡೆದಿದ್ದಾರೆ. ಅಗ್ರ ಸಂಶೋಧಕರ ಪಟ್ಟಿಯಲ್ಲಿ ಇಬ್ಬರನ್ನು ಹೊಂದಿರುವ ಏಕೈಕ ಖಾಸಗಿ ವಿಶ್ವ
ವಿದ್ಯಾನಿಲಯ ಕೆಎಲ್‌ಇ ಆಗಿದೆ ಎಂದು ಪ್ರಕಟಣೆ ತಿಳಿಸಿದೆ.


Spread the love

About Laxminews 24x7

Check Also

ಹೆಸರು ಮತ್ತು ಸೋಯಾಬೀನ್ ಖರೀದಿ ಕೇಂದ್ರದ ಉದ್ಘಾಟನಾ ಸಮಾರಂಭ

Spread the loveಸವದತ್ತಿ ಟಿ.ಎ.ಪಿ.ಸಿ.ಎಂ.ಎಸ್. ಲಿಮಿಟೆಡ್, ಕೃಷಿ ಮಾರಾಟ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ, ಗೋಕಾಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ