ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ನಾಳೆಯಿಂದ ಜಿಲ್ಲೆಯಾದ್ಯಂತ ಸಂಚರಿಸಿ ಜನರ ಅಹವಾಲು ಸ್ವೀಕರಿಸಲಿದ್ದಾರೆ.
ನಾಳೆ ದಿ. 6 ರಂದು ಸ್ವ ಕ್ಷೇತ್ರ ಯಮಕನಮರಡಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಭೇಟಿ ನೀಡಲಿದ್ದಾರೆ.
ದಿ.7 ರಂದು ಬೆಳಿಗ್ಗೆ 10 ಗಂಟೆಗೆ ಬೆಳಗಾವಿಯಲ್ಲಿ ಲಭ್ಯವಿರುವ ಅವರು ಖಾನಾಪೂರ ತಾಲೂಕಿನ ಇಟಗಿಯಲ್ಲಿ ಬೆಳಿಗ್ಗೆ 11 ಗಂಟೆಗೆ, ಹಿರೇಮುನ್ನೋಳ್ಳಿಯಲ್ಲಿ 11.30 ಗಂಟೆಗೆ, ಪಾರೀಶ್ವಾಡದಲ್ಲಿ12 ಗಂಟೆಗೆ ಮತ್ತು 12.30. ಗಂಟೆಗೆ ಹಿರೇಹಟ್ಟಿಹೋಳಿಯಲ್ಲಿ ಭೇಟಿ ನೀಡಿ ಜನರ ಅಹವಾಲು ಆಲಿಸಲಿದ್ದಾರೆ.
ದಿ. 8 ರಂದು ಮಧ್ಯಾಹ್ನ 12 ಗಂಟೆಗೆ ಸವದತ್ತಿ ತಾಲೂಕಿನ ಯರಗಟ್ಟಿಗೆ ಭೇಟಿ ಕೊಡಲಿರುವ ಅವರು ದಿ.9 ರಂದು ಹುಕ್ಕೇರಿ ತಾಲೂಕಿನ ರುಸ್ತಂಪೂರಗೆ ಮತ್ತು ಮಧ್ಯಾಹ್ನ 3 ಗಂಟೆಗೆ ದಡ್ಡಿಯಲ್ಲಿ ಜನರನ್ನು ಭೇಟಿ ಮಾಡಲಿದ್ದಾರೆ.
Laxmi News 24×7