Breaking News

ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ

Spread the love

ಥಣಿ: ಮನಷ್ಯ ಮನಸ್ಸು ಮಾಡಿದರೇ ಯಾವುದೂ ಅಸಾಧ್ಯವಲ್ಲ. ಕಳೇದ ಮೂರು ದಿನಗಳಿಂದ ಸತ್ತಿ ಗ್ರಾಮದಲ್ಲಿ ಪ್ರತಿ ದಿನ ಬೆಳೆಗ್ಗೆ ‘ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ’ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಗ್ರಾಮದ ನೂರಾರು ಯುವಕರು ಸ್ವಯಂ ಪ್ರೇರಿತರಾಗಿ ದುಶ್ಚಟಗಳನ್ನು ಜೋಳಿಗೆಯಲ್ಲಿ ಹಾಕಿದ್ದಾರೆ.

ಇದವೇ ಗ್ರಾಮದ ನಿಜವಾದ ಪರಿವರ್ತನೆ ಎಂದು ಗುಣದಾಳ ಕಲ್ಯಾಣ ಮಠದ ವಿವೇಕಾನಂದ ದೇವರು ಹೇಳಿದರು.

ಸಮೀಪದ ಸತ್ತಿ ಗ್ರಾಮದಲ್ಲಿ ಬಾಳಕೃಷ್ಣ ಮಹಾರಾಜರ 25ನೇ ವರ್ಷದ ಪುಣ್ಯಾರಾಧನೆಯ ಅಂಗವಾಗಿ ಮಂಗಳವಾರ ಜರುಗಿದ ಜಾಗೃತಿ ಜಾಥಾ ಕಾರ್ಯಕ್ರಮದ ಮುಕ್ತಾಯ ಸಮಾರಂಭರದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಗ್ರಾಮದಲ್ಲಿ ಜೋಳಿಗೆ ಹಿಡಿದು ಹೊರಟಾಗ ಅನೇಕರು ಬಂದು ಮದ್ಯದ ಬಾಟಲಿ, ತಂಬಾಕು, ಗುಟಕಾ ಚೀಟಿ, ಬೀಡಿ ಪಾಕೀಟು ತಂದು ಜೋಳಿಗೆಯಲ್ಲಿ ಹಾಕಿ, ಇನ್ನೂ ಮುಂದೆ ಯಾವುದೇ ದುಶ್ಚಟ ಮಾಡುವುದಿಲ್ಲವೆಂದು ರುದ್ರಾಕ್ಷಿ ಧರಿಸಿ ಪ್ರಮಾಣ ಮಾಡಿದ್ದಾರೆ. ಇದು ಅನೇಕರು ತೆಗೆದುಕೊಂಡ ಮಹತ್ವದ ನಿರ್ಧಾರವಾಗಿದೆ ಎಂದರು.

 


Spread the love

About Laxminews 24x7

Check Also

ಮತ್ತೆ ಪಾಚಿಕಟ್ಟಿದ ಸುವರ್ಣ ಸೌಧ:

Spread the loveಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಬೆಳಗಾವಿಯ ಸುವರ್ಣ ವಿಧಾನಸೌಧ ಮತ್ತೆ ಪಾಚಿಕಟ್ಟಿದೆ. ಸ್ವಚ್ಛತೆಗೆ ಅನುದಾನ ಕೊರತೆ ಎದುರಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ