ಬೆಂಗಳೂರು: ಬ್ರೇಕಿಂಗ್ ಆಂಡ್ ಶಾಕಿಂಗ್ ನ್ಯೂಸ್ ಏನಪ್ಪಾ ಅಂದ್ರೆ ಫೇಮಸ್ ಮ್ಯೂಸಿಕ್ ಡೈರೆಕ್ಟರ್ ಅಜನೀಶ್ ಲೋಕನಾಥ್ ಅವರ ಕಿಡ್ನಾಪ್ ಆಗಿದೆ.ಇದೀಗ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ.ಯಾರಪ್ಪ ಕಿಡ್ನಾಪ್ ಮಾಡಿದ್ದು,ಯಾಕೆ ಮಾಡಿದ್ದು,ಅಜನೀಶ್ ಲೋಕನಾಥ್ ಪರಿಸ್ಥಿತಿ ಈಗ ಹೇಗಿದೆ ಅನ್ನೋ ಪ್ರಶ್ನೆಗಳನ್ನ ಫ್ಯಾನ್ಸ್ ತುಂಬಾ ಟೆನ್ಶನ್ನಲ್ಲಿ ಕೇಳುತ್ತಿದ್ದಾರೆ.
ಅಯ್ಯೋ..ಅಯ್ಯೋ..ಇದು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರದ ಪ್ರಮೋಷನ್ಗಾಗಿ ಮಾಡಿರೋ ತಂತ್ರ.ಸೋ ಪ್ಲಾನ್ ಇದೀಗ ಸಿಕ್ಕಾಪಟ್ಟೆ ವರ್ಕೌಟ್ ಆಗಿದ್ದು ಜನಮನಕ್ಕೆ ಹತ್ತಿರವಾಗಿದೆ.’ಹಾಸ್ಟೆಲ್ ಹುಡುಗರುಬೇಕಾಗಿದ್ದಾರೆ’ ಈ ಸಿನಿಮಾ ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಹಾಸ್ಯ ಮನರಂಜನೆಯ ಚಿತ್ರ.ಬಿ ಅಜನೀಶ್ ಲೋಕನಾಥ್ಸಂಗೀತ ಸಂಯೋಜಿಸಿದ್ದು, ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡಿದ್ದಾರೆ. ಗುಲ್ಮೊಹರ್ ಫಿಲಂಸ್ ಮತ್ತು ವರುಣ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಪ್ರಜ್ವಲ್ ಬಿಪಿ, ವರುಣ್ ಕುಮಾರ್, ನಿತಿನ್ ಮತ್ತು ಅರವಿಂದ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಸ್ಟಾರ್ ಪುನೀತ್ ರಾಜ್ ಕುಮಾರ್, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಕಿಚ್ಚ ಸುದೀಪ ಅವರಿಂದ ಸಿನಿಮಾ ಪ್ರಮೋಷನಲ್ ಕಟೆಂಟ್ ಮಾಡಿಸಿ ಗಮನ ಸೆಳೆದಿತ್ತು ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಟೀಂ. ಈ ಬಾರಿ ಮೋಹಕ ತಾರೆ ರಮ್ಯಾ ಅವರನ್ನು ಚಿತ್ರದ ಪ್ರಚಾರ ಕಾರ್ಯಕ್ಕಾಗಿ ಕರೆತಂದು ಸುದ್ದಿ ಮಾಡಿತ್ತು ಚಿತ್ರತಂಡ.ಇದೀಗ ಅಜನೀಶ್ ಲೋಕನಾಥ್ ಅವರನ್ನ ಕಿಡ್ನಾಪ್ ಮಾಡೋ ರೀತಿಯಲ್ಲಿ ಪ್ರಚಾರ ಮಾಡಿ ಗಮನಸೆಳೆದಿದೆ.