Breaking News

ಇ-ವಾಣಿಜ್ಯ ಉತ್ಪನ್ನಗಳ ನಕಲಿ ರಿವ್ಯೂಗೆ ಕಡಿವಾಣ; ನ.25ರಿಂದ ಹೊಸ ನಿಯಮ ಜಾರಿ

Spread the love

ವದೆಹಲಿ: ಇನ್ನು ಮುಂದೆ ಎಲ್ಲ ಇ-ಕಾಮರ್ಸ್‌ ಕಂಪನಿಗಳು, ಪ್ರಯಾಣ- ಟಿಕೆಟಿಂಗ್‌ ಪೋರ್ಟಲ್‌ಗ‌ಳು ಮತ್ತು ಆನ್‌ಲೈನ್‌ ಫ‌ುಡ್‌ ಡೆಲಿವರಿ ಪ್ಲಾಟ್‌ಫಾರಂಗಳು ತಮ್ಮ ಉತ್ಪನ್ನಗಳು ಹಾಗೂ ಸೇವೆಗಳ ಕುರಿತಾದ ಎಲ್ಲ ಪಾವತಿಸಿದ ಅಥವಾ ಪ್ರಾಯೋಜಿತ ರಿವ್ಯೂ(ಪ್ರತಿಕ್ರಿಯೆ)ಗಳನ್ನು ಸ್ವಯಂಪ್ರೇರಿತವಾಗಿ ಬಹಿರಂಗಪಡಿಸಬೇಕು.

 

ಆನ್‌ಲೈನ್‌ ಪ್ರತಿಕ್ರಿಯೆಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ಹೊಸ ಮಾರ್ಗಸೂಚಿಯಲ್ಲಿ ಈ ವಿಚಾರವನ್ನು ಸ್ಪಷ್ಟಪಡಿಸಲಾಗಿದೆ.

ನ.25ರಿಂದಲೇ ಈ ನಿಯಮ ಜಾರಿಯಾಗಲಿದೆ. ಇಂಥ ಕಂಪನಿಗಳು “ಖರೀದಿಸಿದ’ ಅಥವಾ “ಇದೇ ಉದ್ದೇಶಕ್ಕೆಂದೇ ನಿಯೋಜಿಸಲ್ಪಟ್ಟ ವ್ಯಕ್ತಿಗಳಿಂದ ಬರೆಸಲ್ಪಟ್ಟ’ ಪ್ರತಿಕ್ರಿಯೆಗಳನ್ನು ಪ್ರಕಟಿಸುವಂತಿಲ್ಲ ಎಂದೂ ಸೂಚಿಸಲಾಗಿದೆ.

ಉತ್ಪನ್ನಗಳು ಮತ್ತು ಸೇವೆಗಳ ಕುರಿತು ನಕಲಿ, ಮೋಸದ ರಿವ್ಯೂಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಈ ನಿಯಮ ಅನುಷ್ಠಾನ ಮಾಡಿದೆ. ಒಂದು ವೇಳೆ ಇದನ್ನು ಪಾಲಿಸುವಲ್ಲಿ ಕಂಪನಿಗಳು ವಿಫ‌ಲವಾದರೆ, ಅದನ್ನು ನ್ಯಾಯಯುತವಲ್ಲದ ವ್ಯಾಪಾರ ಎಂದು ಪರಿಗಣಿಸಿ, ಗ್ರಾಹಕ ರಕ್ಷಣಾ ಕಾಯ್ದೆಯ ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್‌ ಕುಮಾರ್‌ ಸಿಂಗ್‌ ಹೇಳಿದ್ದಾರೆ.


Spread the love

About Laxminews 24x7

Check Also

ಪಿ ರಾಜೀವ್ ಅವರೇ ಲೋಕಾಯುಕ್ತ ತನಿಖೆ ಯಾವಾಗ? : ರಮೇಶ ಯಡವನ್ನವರ

Spread the love ಚಿಕ್ಕೋಡಿ : ಪಿ ರಾಜೀವ್ ಅವರೇ ಲೋಕಾಯುಕ್ತ ತನಿಖೆ ಯಾವಾಗ? : ರಮೇಶ ಯಡವನ್ನವರ ರಾಯಬಾಗ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ