ದಾವಣಗೆರೆ: ನಮ್ಮ ಕುಟುಂಬದವರು ಕೇಳಿದರೆ ನಾಲ್ಕು ಟಿಕೆಟ್ ಕೊಡಲಾಗುತ್ತದೆ ಎಂದು ಹಿರಿಯ ಕಾಂಗ್ರೆಸಿಗ, ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕುಟುಂಬಕ್ಕೆ ಒಂದು ಟಿಕೆಟ್ ನೀತಿ ಏನೂ ಇಲ್ಲ.
ಕೇಳಿದರೆ ನಮ್ಮ ಕುಟುಂಬಕ್ಕೆ ನಾಲ್ಕು ಟಿಕೆಟ್ ಕೊಡಲಾಗುತ್ತದೆ ಎಂದರು.
ಎಸ್. ಎಸ್. ಮಲ್ಲಿಕಾರ್ಜುನ್ ಟಿಕೆಟ್ ಕೋರಿ ಅರ್ಜಿ ಯಾಕೆ ಸಲ್ಲಿಸಿಲ್ಲ ಎಂಬ ಪ್ರಶ್ನೆಗೆ, ಅವರನ್ನೇ( ಎಸ್. ಎಸ್. ಮಲ್ಲಿಕಾರ್ಜುನ್) ಕೇಳಬೇಕು ಎಂದರು.
ಮಲ್ಲಿಕಾರ್ಜುನ್ ಅವರೊಂದಿಗೆ ಅರ್ಜಿ ಸಲ್ಲಿಸುವ ಬಗ್ಗೆ ಏನೂ ಮಾತನಾಡಿಲ್ಲ. ಅವರವರು ಅವರದ್ದೇ ಸ್ವಂತ ಅಭಿಪ್ರಾಯ ಹೊಂದಿರುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.