ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಪಟ್ನಾಳ ಗ್ರಾಮದಲ್ಲಿ ಗೃಹಿಣಿಯೊಬ್ಬರು ತಮ್ಮ ಇಬ್ಬರು ಮಕ್ಕಳನ್ನು ನವಿಲುತೀರ್ಥ ಜಲಾಶಯದ ಹಿನ್ನೀರಿನಲ್ಲಿ ಮುಳುಗಿಸಿ ಕೊಂದು, ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಮದುರ್ಗ ತಾಲ್ಲೂಕಿನ ಚುಂಚನೂರು ಗ್ರಾಮದ ಶಶಿಕಲಾ ಉರೂಫ್ ತನುಜಾ ಪರಸಪ್ಪ ಗೋಡಿ (32) ಮಕ್ಕಳಾದ ಸುದೀಪ (4) ರಾಧಿಕಾ (3) ಸಾವಿಗೀಡಾದವರು.
ಗೃಹಿಣಿ ಗುರುವಾರ ರಾತ್ರಿ ತಮ್ಮ ಇಬ್ಬರು ಮಕ್ಕಳನ್ನು ನೀರಿನಲ್ಲಿ ಮುಳಗಿಸಿ ಕೊಲೆ ಮಾಡಿದರು. ಬಳಿಕ ತಾವೂ ನೀರಿಗೆ ಹಾರಿದರು. ಕುಟುಂಬದವರು ರಾತ್ರಿಯಿಡೀ ಹುಡುಕಾಡಿದರೂ ಅವರ ಪತ್ತೆಯಾಗಲಿಲ್ಲ. ಶುಕ್ರವಾರ ರಾತ್ರಿ ಶವಗಳು ಹಿನ್ನೀರಿನಲ್ಲಿ ತೇಲುತ್ತಿರುವುದನ್ನು ಕಂಡ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಲಾಶಯದ ಬಳಿಗೆ ಯಾರಿಗೂ ಪ್ರವೇಶ ಇಲ್ಲದ ಕಾರಣ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
Laxmi News 24×7