Breaking News

ಅವತ್ತು ನನ್ನ ಮಾತು ಕೇಳಿದ್ದರೆ ಮಗಳು ಉಳಿಯುತ್ತಿದ್ದಳು. ಶ್ರದ್ದಾ ತಂದೆಯ ಕಣ್ಣಿರೀನ ಮಾತು

Spread the love

ಮುಂಬಯಿ : ದೆಹಲಿಯಲ್ಲಿ ಸಂಚಲನ ಮೂಡಿಸಿದ ಶ್ರದ್ದಾ ಹತ್ಯೆ ಪ್ರಕರಣ ಹಿಂದೆ ಒಂದರ ಹಿಂದೆ ಒಂದರಂತೆ ಭಯಾನಕ ವಿಚಾರಗಳು ಬೆಳಕಿಗೆ ಬರುತ್ತಿವೆ.

ಇದೆಲ್ಲದರ ನಡುವೆ ತನ್ನ ಮಗಳನ್ನು ಕಳೆದುಕೊಂಡ ತಂದೆ ದುಖ್ಖದ ಮಡುವಿನಲ್ಲಿ ಮರುಗುತಿದ್ದಾರೆ, ಶ್ರದ್ದಾ ಹಾಗೂ ಅಫ್ತಾಬ್ ಅಮೀನ್ ಪೂನಾವಾಲ ಪ್ರೀತಿಸುವ ವಿಚಾರ ಮನೆಯಲ್ಲಿ ಗೊತ್ತಾಗುತ್ತಿದ್ದಂತೆ ಶ್ರದ್ದಾ ಮನೆಯಲ್ಲಿ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು, ಆದರೆ ಶ್ರದ್ದಾ ಪೋಷಕರ ಮಾತನ್ನು ಕೇಳುವ ಹಂತದಲ್ಲಿ ಇರಲಿಲ್ಲ ಯಾಕೆಂದರೆ ಆಕೆಯೂ ಅಫ್ತಾಬ್ ನನ್ನ ಮನಸಾರೆ ಇಷ್ಟಪಡುತ್ತಿದ್ದಳು.

 

ಪೋಷಕರ ವಿರೋಧದ ನಡುವೆಯೂ ಮುಂಬಯಿಯಲ್ಲಿದ್ದ ಜೋಡಿ ಪೋಷಕರ ಕಣ್ಣು ತಪ್ಪಿಸಿ ದೆಹಲಿಗೆ ಓಡಿಹೋಗಿದ್ದರು, ಆದರೆ ಈ ವಿಚಾರ ಮಾತ್ರ ಮನೆಯವರಿಗೆ ಗೊತ್ತೇ ಇರಲಿಲ್ಲ ಮನೆಯವರೊಂದಿಗೆ ಫೋನ್ ಕರೆಗಳನ್ನು ಮಾತ್ರ ಮಾಡುತ್ತಿದ್ದ ಶ್ರದ್ದಾ ಮನೆಯವರಿಗೆ ತಾನು ದೆಹಲಿಗೆ ಬಂದಿರುವ ವಿಚಾರವನ್ನು ಮುಚ್ಚಿಟ್ಟಿದ್ದರು.

ಆದರೆ ವಿಧಿಯಾಟ ಬೇರೆಯೇ ಆಗಿತ್ತು ನೋಡಿ ಮುಂಬೈನಿಂದ ದೆಹಲಿಗೆ ತೆರಳಿ ಅಲ್ಲಿ ಫ್ಲ್ಯಾಟ್ ವೊಂದರಲ್ಲಿ ಕಳೆದ ಮೂರು ವರ್ಷಗಳಿಂದ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದ ಜೋಡಿ, ತನ್ನನ್ನು ಮದುವೆಯಾಗು ಎಂದು ಒತ್ತಾಯಿಸಿದ್ದಕ್ಕೆ ಅಫ್ತಾಫ್ ಶ್ರದ್ಧಾಳನ್ನು ಕೊಚ್ಚಿ ಕೊಲೆಗೈದ ಬಳಿಕ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟು 18 ದಿನಗಳ ಕಾಲ ಒಂದೊಂದು ಭಾಗವನ್ನು ಬೇರೆ, ಬೇರೆ ಸ್ಥಳಗಳಲ್ಲಿ ಎಸೆದು ಬಂದಿದ್ದ. ಈ ನಡುವೆ ಬೇರೆ ಯುವತಿಯನ್ನು ತಾನು ಇದ್ದ ಫ್ಲಾಟ್ ಗೆ ಕರೆದುಕೊಂಡು ಬರುತ್ತಿದ್ದನಂತೆ. ಕೊನೆಗೂ ಶ್ರದ್ದಾ ಹತ್ಯೆಯಾಗಿರುವ ವಿಚಾರ ಪೋಷಕರಿಗೆ ತಿಳಿಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.


Spread the love

About Laxminews 24x7

Check Also

ಮದುವೆ ಪತ್ರಿಕೆ ಕೊಡುವ ನೆಪದಲ್ಲಿ ಬಂದ ದುಷ್ಕರ್ಮಿಗಳು: ಮಾಲೀಕರ ಕೈಕಾಲು ಕಟ್ಟಿ 200 ಗ್ರಾಂ ಚಿನ್ನ ಕದ್ದು ಎಸ್ಕೇಪ್

Spread the loveಮಂಗಳೂರು/ಬೆಂಗಳೂರು: ಪರಿಚಯವೇ ಇಲ್ಲದವರು ಮನೆಗೆ ಆಹ್ವಾನ ಪತ್ರಿಕೆ ನೀಡುವ ಸೋಗಿನಲ್ಲಿ ಮನೆಗೆ ಬಂದು, ಹಾಡಹಗಲೇ ಮನೆ ಮಾಲೀಕರ ಕೈಕಾಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ