Breaking News

ಮುಖ್ಯಮಂತ್ರಿಯನ್ನೇ ಅಂಕಲ್​ ಮಾಡಿ ಅಣಕಿಸಿದ ಕಾಂಗ್ರೆಸ್​; ಪೇಸಿಎಂ ರೀತಿ ಸಿಎಂಅಂಕಲ್​ ಅಭಿಯಾನ?

Spread the love

ಬೆಂಗಳೂರು: ಶಾಲಾ ಮಕ್ಕಳಿಗೆ ಇನ್ನೂ ಪಠ್ಯಪುಸ್ತಕ ವಿತರಣೆ ಆಗದೆ ಇರುವ ಬಗ್ಗೆ ದನಿ ಎತ್ತಿರುವ ಕಾಂಗ್ರೆಸ್​ ಈಗ ಮುಖ್ಯಂತ್ರಿ ಬಸವರಾಜ ಬೊಮ್ಮಾಯಿಯನ್ನು ‘ಅಂಕಲ್​’ ಎಂದು ಕರೆದು ಅಣಕವಾಡಿದೆ. ಈ ಹಿಂದೆ ಪೇಸಿಎಂ ಅಭಿಯಾನ ವೈರಲ್​ ಆಗಿತ್ತು. ಅದರಂತೆಯೇ ಸಿಎಂ ಅಂಕಲ್​ ಕೂಡ ಭಾರಿ ವೈರಲ್​ ಆಗುತ್ತಿದೆ.

 

ಇತ್ತೀಚೆಗೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್​ ‘ಕೇಸರಿ ಬಣ್ಣದಿಂದ ಮಕ್ಕಳ ಮಾನಸಿಕ ವಿಕಾಸ ಆಗುತ್ತೆ ಅಂತ ಪರಿಣಿತರು ವರದಿ ನೀಡಿದರೆ ನಾವು ಹಿಂದೇಟು ಹಾಕಲ್ಲ’ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್​ ‘ಶಾಲೆಗಳಿಗೆ ಕೇಸರಿ ಬಣ್ಣ ಬಳಿಯುವ ಬಿಜೆಪಿ ಶಾಸಕರು ತಮ್ಮ ಮನೆಗೆ ಅಥವಾ ಕಂಪೌಂಡಿಗೆ ಕೇಸರಿ ಹಚ್ಚಿದ್ದಾರಾ?’ ಎಂದು ಪ್ರಶ್ನಿಸಿದ್ದಾರೆ.

ಇದರ ಮುಂದಿನ ಹಂತವಾಗಿ ಮಕ್ಕಳಿಗೆ ವಿತರಣೆ ಆಗದೆ ಬಾಕಿ ಉಳಿದಿರುವ ಪಠ್ಯಕ್ರಮದ ವಿಚಾರ ಎತ್ತಿರುವ ಕಾಂಗ್ರೆಸ್​ ‘ಸಿಎಂ ಅಂಕಲ್​’ ಮೂಲಕ ಪ್ರಚಾರ ಪಡೆದುಕೊಳ್ಳುತ್ತಿದೆ. ಟ್ವಿಟರ್​ನಲ್ಲಿ ‘ಸಿಎಂ ಅಂಕಲ್​’ ಅಭಿಯಾನ ಶುರು ಮಾಡಿರುವ ಕಾಂಗ್ರೆಸ್​ ಈಗ ಬಿಜೆಪಿಗೆ ಬಿಸಿ ತುಪ್ಪವಾಗಿದೆ.

ಕಾಂಗ್ರೆಸ್​ ತನ್ನ ಟ್ವಿಟರ್​ ಖಾತೆಯಲ್ಲಿ ಒಂದು ಮಗು ಪ್ರಶ್ನೆ ಕೇಳುತ್ತಿರುವಂತೆ ಟ್ವೀಟ್​ನಲ್ಲಿ ಬರೆದಿದ್ದಾರೆ. ಟ್ವೀಟ್​ನಲ್ಲಿ ‘ಸರ್ಕಾರಿ ಶಾಲೆಗಳಷ್ವೆಬ್ಟೇ ಅಲ್ಲ, ಖಾಸಗಿ ಶಾಲೆಗಳಿಗೂ ಸಂಪೂರ್ಣ ಪಠ್ಯಪುಸ್ತಕ ಕೊಡಲಿಲ್ಲ ಏಕೆ? ನಾವು ಶಾಲೆಗಳಿಗೆ ಬಣ್ಣ ನೋಡಲು ಬರಬೇಕಾ, ಪಾಠ ಕಲಿಯಲು ಬರಬೇಕಾ ಅಂಕಲ್? ಅರ್ಧ ವರ್ಷ ಕಳೆದರೂ ಪುಸ್ತಕವನ್ನೇ ಕೊಟ್ಟಿಲ್ಲ ಅಂದ್ರೆ ನಾವು ಓದಿ ಎಕ್ಸಾಮ್ ಬರೆಯೋದು ಹೇಗೆ ಸಿಎಂ ಅಂಕಲ್?’ ಎಂದು ಶಾಲಾ ಮಕ್ಕಳ ರೀತಿಯಲ್ಲಿ ಟ್ವೀಟ್ ಮಾಡಿ ಕಾಂಗ್ರೆಸ್ ಮುಖ್ಯಮಂತ್ರಿಯನ್ನು ಅಣಕವಾಡಿದೆ.

ಸಿಎಂ ಅಂಕಲ್ ಅಭಿಯಾನದ ಅಡಿಯಲ್ಲಿ ಮತ್ತೊಂದು ಟ್ವೀಟ್​ ಮಾಡಿರುವ ಕಾಂಗ್ರೆಸ್​ ‘ಶಿಕ್ಷಣ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಕರ್ನಾಟಕ 14ನೇ ಸ್ಥಾನಕ್ಕೆ ಕುಸಿದಿದೆಯಂತೆ, ಹಾಗಂತ ಪೇಪರ್‌ನಲ್ಲಿ ಬಂದಿತ್ತು. ನಮಗೆ ಸೂಚ್ಯಂಕದ ಬಗ್ಗೆ ಗೊತ್ತಿಲ್ಲ. ಆದ್ರೆ ನಮಗೆ ಶಾಲೆಯಲ್ಲಿ ಯಾವ ಸೌಕರ್ಯವೂ ಸಿಗ್ತಿಲ್ಲ, ಶಾಲೆಗೆ ಬಂದರೆ ಯಾವುದೋ ಬಸ್ ಸ್ಟ್ಯಾಂಡ್‌ಗೆ ಬಂದಂತೆ ಆಗುತ್ತಿದೆ. ಯಾಕೆ ಈ ಅನ್ಯಾಯ ಮಾಡ್ತಿದೀರಿ ಸಿಎಂ ಅಂಕಲ್?’ ಎಂದು ಪ್ರಶ್ನಿಸಿದ್ದಾರೆ.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ