Breaking News

ಮನೆಯ ವರ್ಕ್ ಆರ್ಡರ್ ನೀಡಲು ಇಪ್ಪತ್ತು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ P.D.O.ಲೋಕಾಯುಕ್ತ ಬಲೆಗೆ

Spread the love

ಅತಿವೃಷ್ಟಿಯಿಂದ ಹಾನಿಗೊಳಗಾಗಿದ್ದ ಮನೆಯ ವರ್ಕ್ ಆರ್ಡರ್ ನೀಡಲು ಇಪ್ಪತ್ತು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಪಿಡಿಒ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಸ್ವಕ್ಷೇತ್ರದಲ್ಲಿಯೇ ನಡೆದಿದೆ.

ಹೌದು ಶಿಗ್ಗಾಂವಿ ತಾಲೂಕಿನ ನಾರಾಯಣಪೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಈರಣ್ಣ ಗಾಣಿಗಿ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ. ಕಳೆದ ಸೆಪ್ಟೆಂಬರನಲ್ಲಿ ಅತಿವೃಷ್ಟಿಯಿಂದ ಮನೆ ಹಾನಿಯಾದ ಮುನವಳ್ಳಿ ಗ್ರಾಮದ ಸಂಗಪ್ಪ ವೀರಭದ್ರಪ್ಪ ಕಿವುಡನವರ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದರು.

ಮನೆ ಪರಿಶೀಲನೆ ಮಾಡಿದ ಅಧಿಕಾರಿಗಳು ಪರಿಹಾರಕ್ಕೆ ಫಲಾನುಭವಿಗಳನ್ನು ಆಯ್ಕೆ ಮಾಡಿದರು ಆದರೆ ಮನೆ ನಿರ್ಮಾಣದ ವರ್ಕ್ ಆರ್ಡರ್ ನೀಡಲು ಪಿಡಿಒ 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. 

ನ10ರಂದು ಮುಂಗಡವಾಗಿ 20 ಸಾವಿರ ರೂಪಾಯಿ ಪಡೆದು ಉಳಿದ ಹಣಕ್ಕೆ ಬೇಡಿಕೆ ಇಟ್ಟಿದ್ದರು ಈ ಬಗ್ಗೆ ಗ್ರಾಮದ ಫಕೀರೇಶ್ ಸಂಗಪ್ಪ ಕಿವುಡನವರ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದರು ಇದಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಿ ಲೋಕಾಯುಕ್ತ ಎಸ್ಪಿ ಎಂ.ಎಸ್.ಕವಲಾಪೂರೆ ಮಾರ್ಗದರ್ಶನದಲ್ಲಿ ಡಿ.ಎಸ್.ಪಿ ಬಿ.ಪಿ.ಚಂದ್ರಶೇಖರ ನೇತೃತ್ವದಲ್ಲಿ ತನಿಖಾಧಿಕಾರಿ ಯು.ಎಸ್.ಅವಟಿ, ಮಂಜುನಾಥ ನಡುವಿನಮನಿ, ಸಿ.ಎಂ.ಬಾರ್ಕಿ, ಎಸ್.ಸಿ.ಮುಗದೂರು, ಎಂ.ಕೆ.ನದಾಫ್, ಡಿ.ಎಸ್.ಬಿಲ್ಲರ್, ಆನಂದ ತಳಕಲ್ಲ, ಬಿ.ಎಸ್.ಸಂಕಣ್ಣವರ, ಆನಂದ ಶೆಟ್ಟರ ಕಾರ್ಯಾಚರಣೆ ನಡೆಸಿ, ಭ್ರಷ್ಟ ಅಧಿಕಾರಿಯ ಮುಖವಾಡ ಬಯಲು ಮಾಡಿದ್ದಾರೆ.


Spread the love

About Laxminews 24x7

Check Also

ನವೆಂಬರ 9 ರಂದು ನಡೆಯಲಿರುವ ಗೋಕಾಕ ಹಿಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮ

Spread the love ನವೆಂಬರ 9 ರಂದು ನಡೆಯಲಿರುವ ಗೋಕಾಕ ಹಿಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮಕ್ಕೆ ಬೆಳಗಾವಿ ಮರಾಠಾ ಲಘು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ